Select Your Language

Notifications

webdunia
webdunia
webdunia
webdunia

ಪ್ರಮಾಣ ವಚನ ಸ್ವೀಕಾರದ ಮರುದಿನವೇ ರಾಜೀನಾಮೆ ವದಂತಿಗಳಿಗೆ ತೆರೆ ಎಳೆದ ಸುರೇಶ್ ಗೋಪಿ

Suresh Gopi

Krishnaveni K

ತ್ರಿಶ್ಶೂರ್ , ಸೋಮವಾರ, 10 ಜೂನ್ 2024 (15:51 IST)
ತ್ರಿಶ್ಶೂರ್: ಪ್ರಮಾಣ ವಚನ ಮರುದಿನವೇ ತ್ರಿಶ್ಶೂರ್ ನ ಬಿಜೆಪಿ ಸಂಸದ, ನಟ ಸುರೇಶ್ ಗೋಪಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಆ ವದಂತಿಗಳಿಗೆ ಸುರೇಶ್ ಗೋಪಿ ತೆರೆ ಎಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಸುದ್ದಿಗಳು ಸುಳ್ಳು ಎಂದಿದ್ದಾರೆ. ತಾನು ರಾಜೀನಾಮೆ ನೀಡುತ್ತಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ‘ಕೆಲವು ಮಾಧ್ಯಮಗಳಲ್ಲಿ ನಾನು ರಾಜೀನಾಮೆ ನೀಡಲಿರುವುದಾಗಿ ವರದಿಯಾಗುತ್ತಿದೆ. ಇದು ಶುದ್ಧ ಸುಳ್ಳು. ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವುದು ಮತ್ತು ಕೇರಳವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ಮೋದಿಜಿಯವರ ಮಾರ್ಗದರ್ಶನದಲ್ಲಿ ನಾವು ಕೇರಳದ ಅಭಿವೃದ್ಧಿಗಾಗಿ ದುಡಿಯಲು ನಾನು ಬದ್ಧನಾಗಿದ್ದೇನೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಮರುದಿನವೇ ಸುರೇಶ್ ಗೋಪಿ ರಾಜೀನಾಮೆಗೆ ಮುಂದಾಗಿ್ದಾರೆ ಎಂದು ಸುದ್ದಿಯಾಗಿತ್ತು. ‘ನಾನು ನಮ್ಮ ನಾಯಕರ ಬಳಿ ನನಗೆ ಈ ಸಚಿವ ಸ್ಥಾನ ಬೇಡವೆಂದು ಹೇಳುತ್ತೇನೆ. ಯಾಕೆಂದರೆ ನಾನು ತ್ರಿಶ್ಶೂರ್ ಜನರ ಸಮಸ್ಯೆಗಳಿಗೆ ಕೇವಲ ಒಬ್ಬ ಸಂಸದನಾಗಿ ಕೆಲಸ ಮಾಡಬೇಕಿದೆ. ಅಲ್ಲದೆ, ನಾನು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಅವುಗಳನ್ನು ಮುಗಿಸಬೇಕಿದೆ. ಇವುಗಳ ನಡುವೆ ಸಚಿವ ಸ್ಥಾನದ ಜವಾಬ್ಧಾರಿ ನನಗೆ ಬೇಡ’ ಎಂದು ಸುರೇಶ್ ಗೋಪಿ ಹೇಳಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಸ್ವತಃ ಸುರೇಶ್ ಗೋಪಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಐಟಿ ಕಸ್ಟಡಿ ಮುಕ್ತಾಯ: ಪರಪ್ಪನ ಅಗ್ರಹಾರ ಜೈಲಿಗೆ ಪ್ರಜ್ವಲ್‌ ರೇವಣ್ಣ ಸ್ಥಳಾಂತರ