ದೀಪಾವಳಿಗೆ ಪಟಾಕಿ ಹೊಡೆಯುವ ಮೊದಲು ಸುಪ್ರೀಂಕೋರ್ಟ್ ತೀರ್ಪು ಏನೆಂದು ನೋಡಿ!

Webdunia
ಮಂಗಳವಾರ, 23 ಅಕ್ಟೋಬರ್ 2018 (15:41 IST)
ನವದೆಹಲಿ: ಈ ದೀಪಾವಳಿಗೆ ಯರ್ರಾ ಬಿರ್ರಿ ಪಟಾಕಿ ಹೊಡೆಯುವಂತಿಲ್ಲ! ಹಾಗಂತ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ದೀಪಾವಳಿ ಹಬ್ಬಕ್ಕೆ ಎರಡು ವಾರಗಳ ಮೊದಲು ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಪಟಾಕಿ ಹೊಡೆಯುವ ವಿಚಾರದಲ್ಲಿ ನಿರ್ಬಂಧ ವಿಧಿಸಿದೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹೆಚ್ಚು ಸದ್ದು ಮಾಡದ ಪಟಾಕಿ ಹೊಡೆಯಬಹುದಾಗಿದೆ.  ಹಗಲು ಹೊತ್ತು ಪಟಾಕಿ ಹೊಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇನ್ನು ಆನ್ ಲೈನ್ ನಲ್ಲಿ ಪಟಾಕಿ ಸೇಲ್ ಮಾಡುವಂತಿಲ್ಲ. ಸುಪ್ರೀಂಕೋರ್ಟ್ ನ ಈ ನಿರ್ದೇಶನ ಪಾಲನೆಯಾಗುವಂತೆ ನೋಡಿಕೊಳ್ಳುವುದು ಸ್ಥಳೀಯ ಪೊಲೀಸರ ಕರ್ತವ್ಯವಾಗಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೀಪಾವಳಿಗೆ ಮಾತ್ರವಲ್ಲ, ಹೊಸ ವರ್ಷದಂದೂ ಮಧ್ಯರಾತ್ರಿ 11.55 ರಿಂದ 12.35 ರವರೆಗೆ ಮಾತ್ರ ಪಟಾಕಿ ಹೊಡೆಯಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಹೀಗಾಗಿ ಪಟಾಕಿ ಹೊಡೆಯುವ ಮೊದಲು ಹುಷಾರ್!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನಭಾಗ್ಯಕ್ಕೆ ಇಂದಿರಾ ಹೆಸರು: ಬಸವಣ್ಣನವರ ಹೆಸರು ನೆನಪಾಗಲಿಲ್ವೇ ಸಿದ್ದರಾಮಯ್ಯನವರೇ

ಪ್ರಧಾನಿ ಮೋದಿ ಎಂದರೆ ಏನು ರೆಸ್ಪೆಕ್ಟ್: ಮೀಟಿಂಟ್ ಬಿಟ್ಟು ಓಡಿ ಬಂದ ನೆತನ್ಯಾಹು

ಋತುಚಕ್ರದ ರಜೆ ಓಕೆ, ಮುಟ್ಟಾಗಿದೆ ಅಂತ ರಜೆ ಕೇಳೋದು ಹೇಗೆ ಸಾರ್: ಸಿದ್ದರಾಮಯ್ಯಗೆ ಪ್ರಶ್ನೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments