Select Your Language

Notifications

webdunia
webdunia
webdunia
webdunia

'ಕೆಂಪು ಜಾಕೆಟ್' ಶಿಶುಕಾಮಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸಂಗತಿ

'ಕೆಂಪು ಜಾಕೆಟ್' ಶಿಶುಕಾಮಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸಂಗತಿ
ನವದೆಹಲಿ , ಸೋಮವಾರ, 16 ಜನವರಿ 2017 (11:53 IST)
700ಕ್ಕೂ ಹೆಚ್ಚು ಬಾಲೆಯರನ್ನು ಗುರಿಯನ್ನಾಗಿಸಿದ್ದ ಶಿಶುಕಾಮಿ ಸುನಿಲ್ ರಸ್ತೋಗಿ 13 ವರ್ಷಗಳ ಬಳಿಕ ದೆಹಲಿ ಪೊಲೀಸರ ಬಲೆಗೆ ಬಿದ್ದಿದ್ದು, ಆತ ಬಿಚ್ಚಿಟ್ಟ ಸತ್ಯಗಳು ಪೊಲೀಸರನ್ನೇ ಬೆಚ್ಚಿ ಬೀಳಿಸಿವೆ.

* ವಾರಾಂತ್ಯದಲ್ಲಿ ದೆಹಲಿಯಲ್ಲಿ ಟೇಲರ್ ಆಗಿ ಕೆಲಸ ಮಾಡುತ್ತಿದ್ದ ಈತ ಉತ್ತರ ಪ್ರದೇಶದ ರಾಮಪುರ ನಿವಾಸಿ. ಕೇವಲ ಸಂಪರ್ಕ ಕ್ರಾಂತಿ ರೈಲನ್ನೇರಿ ದೆಹಲಿಗೆ ಬರುತ್ತಿದ್ದ ಈತ, ಬೆಸ ಸಂಖ್ಯೆ ದಿನಗಳಂದು ಮಾತ್ರ ಪ್ರಯಾಣಿಸುತ್ತಿದ್ದ.
 
* ಸದಾ ಕೆಂಪು ಜಾಕೆಟ್, ನೀಲಿ ಜೀನ್ಸ್ ಧರಿಸಿಯೇ ಬರುತ್ತಿದ್ದ.
 
* ಶಿಶುಕಾಮಿಯಾಗಿದ್ದ ಈತ 700ಕ್ಕೂ ಹೆಚ್ಚು ಬಾಲಕಿಯರನ್ನು ಗುರಿಯನ್ನಾಗಿಸಿ ಅತ್ಯಾಚಾರ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈತನಿಂದ ಅತ್ಯಾಚಾರಕ್ಕೊಳಗಾದವರು 7 ರಿಂದ 11 ವರ್ಷದೊಳಗಿನವರಾಗಿದ್ದಾರೆ.
 
*ಶಾಲೆ ಆಯ್ಕೆ ಮಾಡಿ ಹೆಣ್ಣುಮಕ್ಕಳ ಪಟ್ಟಿ ತಯಾರಿ, ಆ ಹೆಣ್ಣು ಮಕ್ಕಳ ಮಾಹಿತಿ ಕಲೆ ಹಾಕಿ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದ. 
 
*ಕಳೆದ 13 ವರ್ಷಗಳಿಂದ ಈತ ನಿರಂತರವಾಗಿ ಬಾಲೆಯರ ಮೇಲೆ ಅತ್ಯಾಚಾರವೆಸಿದ್ದಾನೆ.
 
*ವೃತ್ತಿಯಲ್ಲಿ ಟೇಲರ್ ಆಗಿರುವ ಈತ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಐವರು ಮಕ್ಕಳ ತಂದೆ.
 
*ಶಾಲೆಯಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ಬಾಲಕಿಯರನ್ನು ನಾನು ನಿಮ್ಮ ತಂದೆ ಸ್ನೇಹಿತ. ಅವರು ನಿಮಗೆ ಬಟ್ಟೆ, ತಿಂಡಿ ಕಳುಹಿಸಿದ್ದಾರೆ ಎಂದು ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗುತ್ತಿದ್ದ.
 
* ಪ್ರತಿ ಬಲಿಗೂ ಹೊಸ ಬಟ್ಟೆಯನ್ನಗೊಂಡ ಒಂದು ಪಾರ್ಸಲ್ ತರುತ್ತಿದ್ದ. ತಾನು ಮತ್ತೆ ಏನೇನೋ ತಂದಿದ್ದೇನೆ ಎಂದು ಕರೆದೊಯ್ಯುತ್ತಿದ್ದ.
 
* 2 ಗಂಟೆಯಿಂದ ನಾಲ್ಕು ಗಂಟೆಯ ನಡುವೆ ಒಂಟಿಯಾಗಿ ಹೋಗುತ್ತಿದ್ದ ಬಾಲಕಿಯರನ್ನು ತನ್ನ ಬಲಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ. 
 
*ಕೇವಲ ದೆಹಲಿಯಲ್ಲಲ್ಲ ಉತ್ತರ ಪ್ರದೇಶ, ಉತ್ತರಾಖಂಡದಲ್ಲು ಕೂಡ ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಾನೆ.
 
*ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆರೋಪಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದೆ ಎಂದು ಪಶ್ಚಾತಾಪವಿಲ್ಲದೆ ನಡಿಯುತ್ತಾನೆ.
 
ಕಳೆದ 13 ವರ್ಷಗಳಿಂದ ಈ ರೀತಿಯ ಹೀನಾಯ ಕೃತ್ಯ ನಡೆಸುತ್ತಿದ್ದರೂ ಅದ್ಯಾವುದೂ ಬೆಳಕಿಗೆ ಬಂದಿರಲಿಲ್ಲ. ಕೆಲ ದಿನಗಳ ಹಿಂದೆ ಎರಡು ಗಂಟೆಗಳ ಅವಧಿಯಲ್ಲಿ ಈತ ಎರಡು ಬಾಲೆಯರನ್ನು ಅಪಹರಿಸಿದ್ದ. ಈ ಮಕ್ಕಳು ನೀಡಿದ ಮಾಹಿತಿಯ ಮೇರೆಗೆ ಈತನ ಪೆನ್ಸಿಲ್ ಸ್ಕೆಚ್ ತಯಾರಿಸಿ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೊನೆಗೂ ಈತ ಪೊಲೀಸರ ಬಲೆಗೆ ಬಿದ್ದಿದ್ದು ರಾಷ್ಟ್ರ ರಾಜಧಾನಿಯ ಪೋಷಕರು ನಿರಾಳರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಕುಮಾರ್ ಹೆಗಡೆ ದುಡುಕಿ ತಪ್ಪು ಮಾಡಿದ್ದಾರೆ: ಯಡಿಯೂರಪ್ಪ ಸಮರ್ಥನೆ