Select Your Language

Notifications

webdunia
webdunia
webdunia
webdunia

ರಜನೀಕಾಂತ್ ಜೂಜಾಡುತ್ತಿರುವ ಫೋಟೋ ಪ್ರಕಟಿಸಿ ಸುಬ್ರಮಣಿಯನ್ ಸ್ವಾಮಿ

ರಜನೀಕಾಂತ್ ಜೂಜಾಡುತ್ತಿರುವ ಫೋಟೋ ಪ್ರಕಟಿಸಿ ಸುಬ್ರಮಣಿಯನ್ ಸ್ವಾಮಿ
NewDelhi , ಶುಕ್ರವಾರ, 7 ಜುಲೈ 2017 (10:31 IST)
ನವದೆಹಲಿ: ರಾಜಕೀಯ ಪ್ರವೇಶಿಸಲು ಸಜ್ಜಾಗುತ್ತಿರುವ ಸೂಪರ್ ಸ್ಟಾರ್ ರಜನೀಕಾಂತ್ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.


ಅಮೆರಿಕಾದಲ್ಲಿ ರಜನೀಕಾಂತ್ ಜೂಜಾಡುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್ ಪುಟದಲ್ಲಿ ಪ್ರಕಟಿಸಿರುವ ಸ್ವಾಮಿ, ‘ವಾವ್! ಆರ್ ಕೆ 420 ತನ್ನ ಆರೋಗ್ಯ ಸುಧಾರಿಸಿಕೊಳ್ಳಲು ಅಮೆರಿಕಾದ ಕ್ಯಾಸಿನೋ ಒಂದರಲ್ಲಿ ಜೂಜಾಡುತ್ತಿದ್ದಾರೆ. ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬುದು ತನಿಖೆಯಾಗಲಿ’ ಎಂದು ಬರೆದುಕೊಂಡಿದ್ದಾರೆ.

ಹಿಂದೆಯೂ ಸುಬ್ರಮಣಿಯನ್ ಸ್ವಾಮಿ ರಜನೀ ರಾಜಕೀಯಕ್ಕೆ ಲಾಯಕ್ಕಾದ ವ್ಯಕ್ತಿಯಲ್ಲ.  ಅವರ ಬಳಿ ಅಕ್ರಮ ಹಣವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ಚಾಟಿ ಬೀಸಿದ್ದಾರೆ. ಮುಂದಿನ ತಿಂಗಳು ರಾಜಕೀಯ ಸೇರುವ ಬಗ್ಗೆ ತೀರ್ಮಾನ ತಿಳಿಸುವುದಾಗಿ ರಜನಿ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಭಾಗ್ಯ ಬೇಕಿದ್ದರೆ, ಶೌಚಾಲಯವೂ ಬೇಕು!