Select Your Language

Notifications

webdunia
webdunia
webdunia
webdunia

ಗುಜರಾತಿನಲ್ಲಿ ಕಲಿತದ್ದು ದೆಹಲಿ ಕೆಲಸಕ್ಕೆ ನೆರವಾಯಿತು: ನರೇಂದ್ರ ಮೋದಿ

ಗುಜರಾತಿನಲ್ಲಿ ಕಲಿತದ್ದು ದೆಹಲಿ ಕೆಲಸಕ್ಕೆ ನೆರವಾಯಿತು: ನರೇಂದ್ರ ಮೋದಿ
ಅಹ್ಮದಾಬಾದ್ , ಗುರುವಾರ, 1 ಸೆಪ್ಟಂಬರ್ 2016 (16:01 IST)
ಗುಜರಾತ್ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಯ ಸೇವೆಯು ನವದೆಹಲಿಯಲ್ಲಿ ಪ್ರಧಾನಿಯಾಗಿ ತಮ್ಮ ಕೆಲಸಕ್ಕೆ ಸಹಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಪ್ರಧಾನಿಯಾಗಿ ಎರಡು ವರ್ಷಗಳ ಬಳಿಕ ತಾವು ನಿರ್ದಿಷ್ಟ ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿತುಕೊಂಡೆ ಎಂದು ನುಡಿದರು.
 
ತವರು ರಾಜ್ಯಕ್ಕೆ ಕೆಟ್ಟ ಹೆಸರು ತರುವ ಯಾವುದೇ ಕೆಲಸವನ್ನು ತಾವು ಮಾಡುವುದಿಲ್ಲ ಎಂದು ಗುಜರಾತಿನ ಜನರಿಗೆ ಮೋದಿ ಭರವಸೆ ನೀಡಿದರು.  ನಾನು ದೆಹಲಿಗೆ ಹೋದ ಮೇಲೆ ರಾಜ್ಯಕ್ಕೆ ಆಗಾಗ್ಗೆ ಬರುತ್ತಿಲ್ಲವೆಂಬ ದೂರುಗಳು ತುಂಬಾ ಬಂದಿವೆ.
 
ನಾನು ದೆಹಲಿಗೆ ಹೋದಾಗ ಎಲ್ಲವೂ ಹೊಸದಾಗಿ ಕಂಡಿತು. ಅಲ್ಲಿ ಕಲಿಯುವುದಕ್ಕೆ, ಗಮನಿಸುವುದಕ್ಕೆ ವಿಷಯಗಳು ತುಂಬಾ ಇದ್ದವು. ಈಗ ನಾನು ಕೆಲಸವನ್ನು ಪರಿಪೂರ್ಣವಾಗಿ ಕಲಿತಿದ್ದೇನೆ ಎಂದು ಮೋದಿ ಹೇಳಿದರು. ಗುಜರಾತಿನಿಂದ ಕಲಿತದ್ದು ಕೂಡ ನನಗೆ ತುಂಬಾ ಉಪಯುಕ್ತವಾಗಿದೆ ಎಂದು 2001ರಿಂದ 2014ರ ಮಧ್ಯಾವಧಿವರೆಗೆ ಮುಖ್ಯಮಂತ್ರಿಯಾಗಿದ್ದ ಮೋದಿ ಹೇಳಿದರು.
 ದೇಶದ ಜನತೆ ಗುಜರಾತಿನ ಪುತ್ರನನ್ನು ಪ್ರಧಾನಿಯಾಗಿ ಸ್ವೀಕರಿಸಿದ ಮೇಲೆ ರಾಜ್ಯಜನತೆ ನಾಚಿಕೆ ಪಡುವಂತ ಯಾವುದೇ ಕೆಲಸವನ್ನು ತಾವು ಮಾಡುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅಡ್ಡಿಯಿಲ್ಲ: ಆರ್.ಅಶೋಕ್