Webdunia - Bharat's app for daily news and videos

Install App

ಒಂದು ಇಲಿ ಹೈಕೋರ್ಟ್ ನ್ಯಾಯಾಧೀಶರನ್ನೇ ರೈಲಿನಿಂದ ಕೆಳಗಿಳಿಸಿತು..!

Webdunia
ಶನಿವಾರ, 4 ನವೆಂಬರ್ 2017 (12:36 IST)
ಒಡಿಶಾ: ರೈಲಿನ ಎಸಿ ಬೋಗಿಯಲ್ಲಿ ಸತ್ತ ಇಲಿ ವಾಸನೆಯಿಂದ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ.


ಒಡಿಶಾ ಹೈಕೋರ್ಟ್‌ ನ್ಯಾಯಾಧೀಶ ಬಿಸ್ವನಾಥ್‌ ರಾಥ್‌ ಶುಕ್ರವಾರ ಭುವನೇಶ್ವರ್‌‌ ನಿಂದ ಆಂಧ್ರದ ವಿಶಾಖಪಟ್ಟಣಂಗೆ ಭುವನೇಶ್ವರ್‌‌-ಮುಂಬೈ ಕೊನಾರ್ಕ್‌ ಎಕ್ಸ್‌ ಪ್ರೆಸ್‌ ಎಸಿ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಖರ್ದಾ ರೋಡ್‌ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನಲ್ಲಿ ಸತ್ತ ಇಲಿಯ ವಾಸನೆ ಬಂದಿದೆ. ಇದರಿಂದ ನ್ಯಾ. ಬಿಸ್ವಾನಾಥ್‌ ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿ ಬೆರ್ಹಾಮ್‌ ಪುರ್‌ ‌ನಲ್ಲಿ ಇಳಿದಿದ್ದಾರೆ.

ನ್ಯಾ. ಬಿಸ್ವಾನಾಥ್‌ ರಾಥ್‌ ಮತ್ತು ನಾನು ಎ1 ಎಸಿ ಬೋಗಿ 13 ಹಾಗೂ 15ನೇ ಸೀಟ್‌ ‌ನಲ್ಲಿ ಪ್ರಯಾಣಿಸುತ್ತಿದ್ದೆವು. ಖರ್ದಾ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಏನೋ ಕೆಟ್ಟ ವಾಸನೆ ಬರುತ್ತಿದೆ ಕಂಡು ಹಿಡಿಯಿರಿ ಎಂದು ನನಗೆ ಕೇಳಿದರು. ಆಗ ನಾನು ಕಿಟಕಿಯತ್ತ ನೋಡಿದಾಗ ಗ್ಲಾಸಿನ ಮಧ್ಯೆ ಒಂದು ಸತ್ತ ಇಲಿ ಹಾಗೂ ಮೂರು ಜೀವಂತ ಇಲಿಗಳು ಕಂಡು ಬಂದವು ಎಂದು ನ್ಯಾ. ಬಿಸ್ವಾನಾಥ್‌ ಜತೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಸತ್ತ ಇಲಿ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಬೆರ್ಹಾಮ್‌ ಪುರ್‌‌ ನಿಲ್ದಾಣದಲ್ಲೇ ಕೆಮಿಕಲ್‌ ನಿಂದ ಶುಚಿಗೊಳಿಸಿರುವುದಾಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments