Publish Date: Fri, 03 Nov 2017 (12:40 IST)
Updated Date: Fri, 03 Nov 2017 (12:43 IST)
ಬೆಂಗಳೂರು: ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಹೆಚ್ಡಿಕೆ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದಾದ ಬಳಿಕ ಮಾಜಿ ಸಿಎಂ ಹೆಚ್ಡಿಕೆ ಫುಲ್ ರೆಸ್ಟ್ ನಲ್ಲಿದ್ದಾರೆ. ಹೀಗಾಗಿ ಜೆಪಿ ನಗರದಲ್ಲಿರುವ ಹೆಚ್ಡಿಕೆ ನಿವಾಸದಲ್ಲಿ ಅವರನ್ನು ಭೇಟಿಯಾದ ಟಿಬಿ ಜಯಚಂದ್ರ ಆರೋಗ್ಯ ವಿಚಾರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಭೇಟಿ ನೀಡಿದ ಚಂದ್ರಶೇಖರ ಸ್ವಾಮಿಜಿ ಸಹ ಹೆಚ್ಡಿಕೆ ಯೋಗಕ್ಷೇಮ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಆಶೀರ್ವದಿಸಿದರು.