Select Your Language

Notifications

webdunia
webdunia
webdunia
webdunia

ಕಾಕ್ ಪಿಟ್‌ನಲ್ಲಿ ಗಗನಸಖಿಗೆ ಕಿರುಕುಳ;ಸ್ಪೈಸ್ ಜೆಟ್ ಪೈಲಟ್ ವಜಾ

SpiceJet
ವಿಮಾನದ ಕಾಕ್‌ಪಿಟ್‌ನೊಳಗೆ ಕುಳಿತುಕೊಳ್ಳುವಂತೆ ಗಗನಸಖಿಗೆ ಬಲವಂತಪಡಿಸಿ ಕಿರುಕುಳ ನೀಡಿದ್ದ ಅಂತರಾಷ್ಟ್ರೀಯ ವಿಮಾನದ ಪೈಲಟ್‌ನನ್ನು ಸ್ಪೈಸ್ ಜೆಟ್ ವಜಾಗೊಳಿಸಿದೆ.

ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯ ಪ್ರಕಾರ ಫೆಬ್ರವರಿ 28 ರಂದು ಕೊಲ್ಕತಾದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದ ಪೈಲಟ್ ತನ್ನ ಸೀಟ್‌ನಲ್ಲಿ ಗಗನಸಖಿಯನ್ನು ಬಲವಂತವಾಗಿ ಕೂರಿಸಿಕೊಂಡಿದ್ದ. ಅದೇ ರಾತ್ರಿ ವಿಮಾನ ವಾಪಸ್ ಆಗುವ ಸಂದರ್ಭದಲ್ಲೂ ತನ್ನ ದುರ್ವರ್ತನೆಯನ್ನಾತ ಪುನರಾವರ್ತಿಸಿದ್ದ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ವಿಮಾನದ ಸಹ ಪೈಲಟ್‌ನ್ನು ಕಾಕ್‌ಪಿಟ್‌ನಿಂದ ಹೊರಕ್ಕೆ ಕಳುಹಿಸಿದ್ದ.
 
ತನ್ನ ಜತೆ ಪೈಲಟ್ ಅನುಚಿತವಾಗಿ ವರ್ತಿಸಿದ್ದರ ಬಗ್ಗೆ ಗಗನ ಸಖಿ ಸ್ಪೈಸ್ ಜೆಟ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡು ಪೈಲಟ್‌ನ್ನು ವಜಾಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada