Select Your Language

Notifications

webdunia
webdunia
webdunia
webdunia

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್
ನವದೆಹಲಿ , ಬುಧವಾರ, 26 ಜುಲೈ 2017 (13:10 IST)
ಸಂಸದ ಅನುರಾಗ್ ಠಾಕೂರ್‌ ಲೋಕಸಭೆಯ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಲೋಕಸಭೆಯ ಸ್ಪೀಕರ್ ವಾರ್ನಿಂಗ್ ನೀಡಿದ್ದಾರೆ. 
 
ಲೋಕಸಭೆಯಲ್ಲಿ ಯಾಯವುದೇ ರೀತಿಯ ಚಿತ್ರೀಕರಣ ಮಾಡಬಾರದು ಎನ್ನುವ ನಿಯಮವಿದ್ದರೂ ಸಂಸದ ಅನುರಾಗ್ ಠಾಕೂರ್, ಮೊಬೈಲ್ ಚಿತ್ರೀಕರಣ ಮಾಡಿರುವುದು ಆತಂಕದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
 
ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಜ್ಞಾನ ವಿರುವವರೇ ಸಂಸತ್ತಿನ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಬೇಸರದ ಸಂಗತಿ ಎಂದು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಭದ್ರತಾ ಕಾರಣಗಳಿಂದಾಗಿ ಸಂಸತ್ತಿನೊಳಗೆ ಯಾವುದೇ ರೀತಿಯ ಚಿತ್ರೀಕರಣಕ್ಕೆ ಅನುಮತಿ ನೀಡುವುದಿಲ್ಲ. ಆದರೆ. ಸಂಸದ ಅನುರಾಗ್ ಠಾಕೂರ್ ತಮ್ಮ ಮೊಬೈಲ್‌ನಿಂದ ಸಂಸತ್ತಿನ ಕಾರ್ಯಕಲಾಪವನ್ನು ಚಿತ್ರೀಕರಿಸಿಕೊಂಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಲ್ಲಿ ಕೊಟ್ಟ ಬಿರಿಯಾನಿಯಲ್ಲಿತ್ತು ಸತ್ತ ಹಲ್ಲಿ..!