Select Your Language

Notifications

webdunia
webdunia
webdunia
webdunia

ಸೋನಿಯಾ ಯಾರಿಗೂ ಹೆದರಲ್ಲ, ಆದ್ರೆ, ಬಿಜೆಪಿಗೆ ಸಂವಿಧಾನ, ಕಾನೂನಿನ ಭಯವಿದೆ: ಅಮಿತ್ ಶಾ

ಸೋನಿಯಾ ಯಾರಿಗೂ ಹೆದರಲ್ಲ, ಆದ್ರೆ, ಬಿಜೆಪಿಗೆ ಸಂವಿಧಾನ, ಕಾನೂನಿನ ಭಯವಿದೆ: ಅಮಿತ್ ಶಾ
ನವದೆಹಲಿ , ಗುರುವಾರ, 28 ಏಪ್ರಿಲ್ 2016 (16:05 IST)
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ. ಆದರೆ.ಬಿಜೆಪಿಗೆ ಸಂವಿಧಾನ ಮತ್ತು ಕಾನೂನಿನ ಭಯವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
 
ಯಾರಿಗೂ ಹೆದರುವುದಿಲ್ಲ ಎಂದು ಹೇಳಿರುವುದು ಸೂಕ್ತವಾಗಿದೆ. ಆದ್ದರಿಂದಲೇ ನಿಮ್ಮ ಸರಕಾರದ ಅವಧಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರಗಳು ನಡೆದಿರುವುದು ಎಂದು ಟಾಂಗ್ ನೀಡಿದ್ದಾರೆ.
 
ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡಿದ ಅವ್ಯವಹಾರದಲ್ಲಿ ಭ್ರಷ್ಟಾಚಾರವಾಗಿರುವುಸಾಬೀತಾಗಿದ್ದರಿಂದ ಅಗುಸ್ಟಾ ವೆಸ್ಟ್‌ಲ್ಯಾಂಡ್‌ನ ಮಾಜಿ ಮುಖ್ಯಸ್ಥ ಬ್ರೂನೋ ಸ್ಪಾಗ್ನಲೋನಿ ಮತ್ತು ಕಂಪೆನಿಯ ಸಿಇಒ ಗಿಯುಸೆಪ್ಪೆ ಓರ್ಸಿ ಎನ್ನುವವರನ್ನು ಜೈಲಿಗೆ ಅಟ್ಟಲಾಗಿತ್ತು. ತೀರ್ಪಿನಲ್ಲಿ ಸೋನಿಯಾ ಹೆಸರು ಬಂದಿರುವುದು ಬಿಜೆಪಿಗೆ ಹೊಸ ಅಸ್ತ್ರ ದೊರೆತಂತಾಗಿದೆ.
 
ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಏರ್‌ಪೋರ್ಸ್ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಅವರ ಹೆಸರುಗಳು ಬಹಿರಂಗವಾಗಿವೆ. 
 
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅವ್ಯವಹಾರ ನಡೆದಿದೆ. ಆದ್ದರಿಂದ, ಯಾರು ಎಷ್ಟು ಹಣ ಪಡೆದಿದ್ದರು ಎನ್ನುವುದನ್ನು ಕಾಂಗ್ರೆಸ್ ಬಹಿರಂಗಪಡಿಸುತ್ತದೆಯೇ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯಿಂದ ಪ್ರೇಮಿ ಮೇಲೆ ಚಾಕುವಿನಿಂದ ಹಲ್ಲೆ