Daily Horoscope
✕

ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!

Webdunia
ಶನಿವಾರ, 8 ಜನವರಿ 2022 (12:22 IST)
ಮುಂಬೈ : ಮತ್ತೊಂದು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ ತಂದೆಯನ್ನು ಮಗನೇ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
 
ಶಂಕರ್ ರಾಂಭೌ ಬೋರ್ಹಾಡೆ (80) ಮೃತ ವ್ಯಕ್ತಿ. ಶೇಖರ್ ಬೋರ್ಹಾಡೆ (47) ಆರೋಪಿ. ಇವರು ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ಘಟನೆ ನಡೆದಿದೆ.

ಶಂಕರ್ ಬೋರ್ಹಾಡೆ ಮ್ಯಾಟ್ರಿಮೋನಿಯಲ್ಲಿ ಮರು ಮದುವೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಈ ವಿಷಯ ತಿಳಿದ ಶೇಖರ್ ಕೋಪಗೊಂಡಿದ್ದ. ಇದರಿಂದಾಗಿ ಆತ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾರೆ.

ಬಳಿಕ ಶೇಖರ್ ರಾಜಗುರು ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತನ್ನ ತಂದೆ ಮರು ಮದುವೆಯಾಗಲು ಬಯಸಿದ್ದರು. ಇದರಿಂದಾಗಿ ಕೋಪಗೊಂಡು ಅವರನ್ನು ಹತ್ಯೆಗೈದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಸುವಿನ ಕುತ್ತಿಗೆಗೆ ಬಾಯಿ ಹಾಕಿದ್ದ ಹುಲಿ, ಇನ್ನೇನು ಸತ್ತೇ ಹೋಯ್ತು ಎನ್ನುವಾಗ ಕಾಪಾಡಿದ್ದು ಯಾರು ನೋಡಿ Video

ಲಂಚ ಕೊಡದಿದ್ದಕ್ಕೆ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ಸಿಬ್ಬಂದಿ; ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ Video

ದೇವರ ಪವಾಡ ಎಂದರೆ ಇದೇ ಇರಬೇಕು… ಶಿವಲಿಂಗದ ಸುತ್ತ ಪ್ರತ್ಯಕ್ಷವಾದ 3 ನಾಗರಹಾವುಗಳು video

ಉತ್ತರಾಖಂಡ: 200 ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಕಾರು;ಭೀಕರ ದೃಶ್ಯ ಡ್ಯಾಶ್ ಕಾಮ್ ನಲ್ಲಿ ಸೆರೆ video

ಬಳ್ಳಾರಿಯ ಜ್ಯುವೆಲರಿ ಶಾಪ್‌ನಲ್ಲಿ ದಿಢೀರ್ ಬೆಂಕಿ ಅವಘಡ: ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ Video

ಮುಂದಿನ ಸುದ್ದಿ
Show comments