Select Your Language

Notifications

webdunia
webdunia
webdunia
webdunia

7 ವರ್ಷಗಳ ಬಳಿಕ ಮನೆಗೆ ಮರಳಿದ ಸೈನಿಕ ಹೇಳಿದ್ದೇನು?

Soldier
ಡೆಹ್ರಾಡೂನ್ , ಶುಕ್ರವಾರ, 17 ಜೂನ್ 2016 (09:46 IST)
ಮೃತಪಟ್ಟಿದ್ದಾನೆ ಎಂದು ಕೊಂಡಿದ್ದ ಸೈನಿಕ ಬರೊಬ್ಬರಿ 7 ವರ್ಷಗಳ ನಂತರ ಮನೆಗೆ ಮರಳಿದ ಸಿನಿಮೀಯ ಶೈಲಿಯ ನೈಜ ಘಟನೆಯ ಬಗ್ಗೆ ಓದಿಯೇ ಇರುತ್ತೀರಿ. ದೇಶಸೇವೆ ಮಾಡುತ್ತಿರುವಾಗ ಅಪಘಾತಕ್ಕೀಡಾಗಿ ಪಡಬಾರದ ಕಷ್ಟಗಳನ್ನು ಸಹಿಸಿ 7 ವರ್ಷ ಭಿಕ್ಷುಕನಾಗಿ ಕಳೆದು ಮತ್ತೆ ಪುನರ್ಜನ್ಮ ಪಡೆದಿರುವ ಸೈನಿಕ ಧರ್ಮವೀರ್ ಮುಂದಿನ ಬದುಕಿನ ಬಗ್ಗೆ ಏನನ್ನುತ್ತಾನೆ ಗೊತ್ತೇ? 
 
ತನ್ನ ಕುಟುಂಬದಿಂದ 7 ವರ್ಷ ದೂರವಿದ್ದ ಆತ ಈಗ ತನ್ನ ಕುಟುಂಬದೊಂದಿಗೆ ಸಮಯ ಕಳೆಯಬೇಕೆನ್ನುತ್ತಿರಬಹುದೆಂದು ನೀವು ಅಂದುಕೊಂಡಿರಬಹುದು. ಆದರೆ ಆತ ಸಂಪೂರ್ಣ ದೇಶವೇ ತಲೆಬಾಗಬೇಕು ಎನ್ನುವಂತ ಮಾತುಗಳನ್ನಾಡುತ್ತಾನೆ ಆತ. ಅವಕಾಶ ನೀಡಿದರೆ ನಾನು ಮತ್ತೆ ದೇಶ ಸೇವೆಗೆ ಮರಳಲು ಬಯಸುತ್ತೇನೆ ಎನ್ನುವ ಆತನ ಹೃದಯ ದೇಶಸೇವೆಗೆ ಮತ್ತೆ ತುಡಿಯುತ್ತಿದೆ. 
 
ನಿವೃತ್ತ ಸುಬೇದಾರ್ ಕೈಲಾಸ್ ಯಾದವ್ ಹಿರಿಯ ಪುತ್ರ ಧರ್ಮವೀರ್ ಸಿಂಗ್ 2009ರಲ್ಲಿ ಹರಿದ್ವಾರದಲ್ಲಿ ನಡೆದ ಅಪಘಾತವೊಂದರ ಬಳಿಕ ನಾಪತ್ತೆಯಾಗಿದ್ದ. ಮಿಲಿಟರಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಇನ್ನಿಬ್ಬರು ಸೈನಿಕರ ಜತೆ ಅಪಘಾತಕ್ಕೊಳಗಾಗಿದ್ದ. ಮೂರು ಜನರ ದೇಹಗಳು ಸಿಕ್ಕಿರಲಿಲ್ಲ. ಆದರೆ ಕೆಲವು ದಿನಗಳ ಬಳಿಕ ಇಬ್ಬರು ಸೈನಿಕರು ಮರಳಿ ಬಂದಿದ್ದರು. ಆದರೆ ಸಿಂಗ್ ಮರಳಿರಲಿಲ್ಲ. ಹೀಗಾಗಿ ಮೂರು ವರ್ಷದ ಬಳಿಕ ಆತ ಸತ್ತಿದ್ದಾನೆ ಎಂದು ಘೋಷಿಸಿ ಕುಟುಂಬಕ್ಕೆ ಪರಿಹಾರ ನೀಡಿ, ನಿವೃತ್ತಿ ವೇತನವನ್ನು ಆರಂಭಿಸಲಾಗಿತ್ತು ಎಂದು ವೈದ್ಯನಾಗಿರುವ ಸಿಂಗ್ ಸಹೋದರ ರಾಮ್ ನಿವಾಸ್ ಘಟನೆಯನ್ನು ವಿವರಿಸುತ್ತಾನೆ. 
 
ಆದರೆ ಸಿಂಗ್ ಬದುಕುಳಿದಿದ್ದ. ಎಲ್ಲ ನೆನಪುಗಳನ್ನು ಕಳೆದುಕೊಂಡಿದ್ದ ಆತ ಹರಿದ್ವಾರದ ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ. ಇತ್ತೀಚಿಗೆ ಆತನಿಗೆ ಬೈಕ್ ಒಂದು ಡಿಕ್ಕಿ ಹೊಡೆದಾಗ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಪ್ರಜ್ಞೆ ಮರಳಿದಾಗ ಆತನಿಗೆ ಹಳೆಯ ನೆನಪು ಬಂದಿದೆ. ಆದರೆ ಕಳೆದ 7 ವರ್ಷ ತಾನು ಏನು ಮಾಡುತ್ತಿದ್ದೆ  ಎಂಬ ನೆನಪು ಆತನಿಗಿಲ್ಲ. ಅಪಘಾತ ನಡೆಯುವ ಸಂದರ್ಭದಲ್ಲಿ ತಾನು ಭಿಕ್ಷೆ ಬೇಡುತ್ತಿದ್ದುದಷ್ಟೇ ನೆನಪಿದೆ.
 
ತನಗೆ ಅಪಘಾತ ಮಾಡಿದ್ದ ಬೈಕ್ ಸವಾರ ನೀಡಿದ್ದ 500 ರೂಪಾಯಿಯಿಂದ ದೆಹಲಿಗೆ ಟಿಕೆಟ್ ತೆಗೆದುಕೊಂಡ ಆತ ಅಲ್ವಾರ್ ಬಳಿ ಇರುವ ತನ್ನ ಗ್ರಾಮ ಭಿಟೆಡಾಗೆ ಮರಳಿದ್ದಾನೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ