ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರದ ವಿರುದ್ಧ ನಿಲ್ಲದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಸಂಸದೆ ಪೂನಂ ಮಹಾಜನ್,'ನಿದ್ರಾ ಸುಂದರ' ಎಂದು ಅಣಕಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್, ಸಂಸತ್‌ಗೆ ಹೋದಾಗಲೆಲೆಲ್ಲ ತೂಕಡಿಸುವ ರಾಹುಲ್ ಅವರು ನಿದ್ರಾ ಸುಂದರ ಎಂದು ಅಪಹಾಸ್ಯ ಮಾಡಿದ್ದಾರೆ. ಜತೆಗೆ ನಿದ್ದೆಯಿಂದ ಎದ್ದು ನೋಟು ನಿಷೇಧದ ರಾಗ ಹಾಡುವುದನ್ನು ನಿಲ್ಲಿಸಿ ಎಂದು ರಾಹುಲ್ ಅವರಿಗೆ ಸಲಹೆ ನೀಡಿದ್ದಾರೆ.
ರಾಹುಲ್ ಅವರನ್ನು ನಾನು ನಿದ್ರಾ ಸುಂದರ ಎಂದು ಕರೆಯುತ್ತೇನೆ. ನಾನು ಸಂಸತ್‌ಗೆ ಹೋದಾಗಲೆಲ್ಲ ಅವರು ಮಲಗಿರುವುದನ್ನೇ ನೋಡುತ್ತೇನೆ. ಕೈ ಯುವರಾಜ ಹಣದುಬ್ಬರ, ನೋಟು ನಿಷೇಧದ ಬಗ್ಗೆ ಮಾತನಾಡುತ್ತಾರೆ ಎಂದುಕೊಳ್ಳುತ್ತಿರುತ್ತೇನೆ. ಕನಿಷ್ಟ ಪಕ್ಷ ಅವರು ನಿದ್ದೆಯಿಂದ ಏಳಲಿ ಎಂದಿರುವ ಮಹಾಜನ್, ದೇಶ ಎದ್ದಿದೆ ರಾಹುಲ್, ನೀವು ಯಾವಾಗ ಏಳುವಿರಿ ಎಂದು ಪ್ರಶ್ನಿಸಿದ್ದಾರೆ.
ಇಂತಹ ನಾಯಕರಿಗೆ ನನ್ನ ಒಂದೇ ಸಲಹೆ ಏನೆಂದರೆ, ನೋಟು ನಿಷೇಧ ರಾಗ ಹಾಡುವುದನ್ನು ನಿಲ್ಲಿಸಿ, ದೇಶ ಮುನ್ನಡೆಯುತ್ತಿದೆ. ಸುವರ್ಣಯುಗ ಆರಂಭವಾಗಿದೆ ಎಂದಿದ್ದಾರೆ ಪೂನಮ್.
ಮುಂಬೈನ ಉತ್ತರ ಕೇಂದ್ರ ವಿಭಾಗದ ಸಂಸದೆಯಾಗಿರುವ 36 ವರ್ಷದ ಪೂನಂ ಅವರು, ಅನುರಾಗ್ ಠಾಕೂರ್ ಅವರಿಂದ ತೆರವಾಗಿದ್ದ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಅಧಿಕಾರವನ್ನು ಗುರುವಾರ ವಹಿಸಿಕೊಂಡರು.
36 ವರ್ಷದ ಮಹಾಜನ್ ಉತ್ತರ-ಕೇಂದ್ರ ಮುಂಬೈನ ಸಂಸದರಾಗಿದ್ದು, ಅನುರಾಗ್ ಠಾಕೂರ್ ಬಳಿಕ ಭಾರತೀಯ ಜನತಾ ಯುವ ಮೋರ್ಚಾವನ್ನು ಮುನ್ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ