Select Your Language

Notifications

webdunia
webdunia
webdunia
webdunia

ಕುಳಿತಲ್ಲೇ ನೋಡಿ ನಿಮ್ಮ ನಗರ : ಬಳಸೋದು ಹೇಗೆ?

ಕುಳಿತಲ್ಲೇ ನೋಡಿ ನಿಮ್ಮ ನಗರ : ಬಳಸೋದು ಹೇಗೆ?
ಬೆಂಗಳೂರು , ಮಂಗಳವಾರ, 30 ಮೇ 2023 (09:46 IST)
ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ.

 
* ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಲು ನೀವು ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು.

* ಸರ್ಚ್ ಪಟ್ಟಿಯ ಅಡಿಯಲ್ಲಿ ಬಲ ಭಾಗದಲ್ಲಿ ಕಾಣಿಸುವ ಲೇಯರ್ ಬಾಕ್ಸ್ ಅನ್ನು ಆಯ್ಕೆ ಮಾಡಬೇಕು. ಅದರಲ್ಲಿ ಗೋಚರಿಸುವ ಸ್ಟ್ರೀಟ್ ವ್ಯೂ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

* ಈಗ ನಿಮ್ಮ ಗೂಗಲ್ ಮ್ಯಾಪ್ನಲ್ಲಿ ನೀಲಿ ಬಣ್ಣದ ಗೆರೆಗಳನ್ನು ಗಮನಿಸಬಹುದು. ಈ ಗೆರೆಗಳು ಇರುವ ಪ್ರದೇಶಗಳನ್ನು ನೀವು ಕುಳಿತಲ್ಲಿಯೇ ಮೊಬೈಲಿನಲ್ಲಿ ವೀಕ್ಷಿಸಬಹುದು.

* ಈಗ ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಮ್ಯಾಪ್ನಲ್ಲಿ ಕಾಣಿಸುವ ಚಿಕ್ಕ ಚಿಕ್ಕ ವೃತ್ತಗಳನ್ನು ಕ್ಲಿಕ್ ಮಾಡಿದರೆ ಆ ಪ್ರದೇಶವನ್ನು ನೀವು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು.

* ನೀವು ಆ ಪ್ರದೇಶವನ್ನು ಇನ್ನಷ್ಟು ನಿಖರವಾಗಿ ಹಾಗೂ ಮುಂದಕ್ಕೆ, ಹಿಂದಕ್ಕೆ ಚಲಿಸಿ ವೀಕ್ಷಿಸಲು ಬಯಸಿದರೆ ಸ್ಕ್ರೀನ್ನಲ್ಲಿ ಕಾಣಿಸುವ ಬಾಣದ ಗುರುತುಗಳನ್ನು ಬಳಸಬಹುದು.

* ನೀವು ಆ ಚಿತ್ರವನ್ನು ಝೂಮ್ ಮಾಡಿಯೂ ನೋಡಬಹುದು. ಪರದೆಯ ಕೆಳ ಭಾಗದಲ್ಲಿ ಆ ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ ಎಂಬುದನ್ನು ನೀವು ನೋಡಬಹುದು.

* ನೀವು ಬ್ರೌಸರ್ನಲ್ಲಿ ಸ್ಟ್ರೀಟ್ ವ್ಯೂ ಬಳಸಲು ಬಯಸಿದರೆ, ಮೊದಲು ಗೂಗಲ್ ಕ್ರೋಮ್ ಅನ್ನು ತೆರೆಯಿರಿ. ಬಲ ಭಾಗದಲ್ಲಿ ಕಾಣಿಸುವ ಆ್ಯಪ್ಸ್ ಆಯ್ಕೆಯಲ್ಲಿ ಗೂಗಲ್ ಮ್ಯಾಪ್ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.

* ಈಗ ಕಾಣಿಸುವ ಮ್ಯಾಪ್ನ ಬಲ ಭಾಗದಲ್ಲಿ ಲೇಯರ್ನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸ್ಟ್ರೀಟ್ ವ್ಯೂ ಆಯ್ಕೆ ಕಾಣಿಸುತ್ತದೆ.
* ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಅಪ್ಲಿಕೇಶನ್ ಬಳಸಿದಂತೆಯೇ ಅನುಸರಿಸಿ.

ಸ್ಟ್ರೀಟ್ ವ್ಯೂ ಫೀಚರ್ ಭಾರತದಲ್ಲಿ ಹೆಚ್ಚಿನ ಪ್ರದೇಶಗಳನ್ನು ಕವರ್ ಮಾಡಲು ಜೆನೆಸಿಸ್ ಇಂಟರ್ನ್ಯಾಷನಲ್ ಹಾಗೂ ಟೆಕ್ ಮಹೀಂದ್ರದೊಂದಿಗೆ ಗೂಗಲ್ ಕೈ ಜೋಡಿಸಿದೆ. ಆದರೂ ಕೆಲ ಭದ್ರತಾ ಸಮಸ್ಯೆಗಳನ್ನು ಗೂಗಲ್ ಸ್ಟ್ರೀಟ್ ವ್ಯೂ ಎದುರಿಸುತ್ತಿದ್ದು, ಸದ್ಯ ಗೌಪ್ಯತೆಯನ್ನು ಕಾಪಾಡಲು ಫೋಟೋಗಳಲ್ಲಿ ಕಾಣಿಸುವ ಜನರ ಮುಖಗಳನ್ನು ಬ್ಲರ್ ಮಾಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ