Select Your Language

Notifications

webdunia
webdunia
webdunia
webdunia

ಒಂದು ಕೋಟಿಗಾಗಿ ತಂದೆಯ ಕೊಲೆಗೈದ ಅಕ್ಕತಂಗಿ

Sister
ಆಗ್ರಾ , ಮಂಗಳವಾರ, 8 ನವೆಂಬರ್ 2016 (14:47 IST)
ಒಂದು ಕೋಟಿ ರೂಪಾಯಿಗಾಗಿ ಅಕ್ಕ-ತಂಗಿ ಸೇರಿ ತಂದೆಯನ್ನೇ ಇರಿದು ಕೊಂದ ದಾರುಣ ಘಟನೆ ಆಗ್ರಾದಲ್ಲಿ ನಡೆದಿದೆ. ಕೃತ್ಯದಲ್ಲಿ ಜ್ಯೋತಿ ಪ್ರಿಯಕರನು ಕೂಡ ಸಾಥ್ ನೀಡಿದ್ದು ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
 
ಪೊಲೀಸರು ಹೇಳುವ ಪ್ರಕಾರ ಇಬ್ಬರು ಸಹೋದರಿಯರಾದ ಜ್ಯೋತಿ ಕುಶ್ವಾಹ(24) ಮತ್ತು ಚಾಂದ್ನಿ ಕುಶ್ವಾಹ (26) ಅಕ್ಟೋಬರ್ 30 ರಂದು ವೃತ್ತಿಯಲ್ಲಿ ಕಾರ್‌ಪೆಂಟರ್ ಆಗಿರುವ ಸರ್ವೇಶ್ ಶರ್ಮಾ ಜತೆ ಸೇರಿ ತಂದೆ ದೀಪಾವಳಿ ಪೂಜೆಗೆ ತಯಾರಿ ಮಾಡುತ್ತಿದ್ದ ತಂದೆ ಮಥುರಾ ಕುಶ್ವಾಹ( 65) ನನ್ನು ಯನ್ನು ಆತನ ಬೆಡ್  ರೂಮ್‌ನಲ್ಲಿಯೇ ಮುಗಿಸಿದ್ದಾರೆ. 
 
ಮೂವರು ಸೇರಿ ಮೊದಲೇ ಕುಶ್ವಾಹನನ್ನು ಶೂಟ್ ಮಾಡುವ ಯೋಜನೆ ರೂಪಿಸಿದ್ದರು. ಜ್ಯೋತಿ ಅದಕ್ಕಾಗಿ ನಾಡಬಂದೂಕನ್ನು ತಂದಿಟ್ಟಿದ್ದಳು. ದೀಪಾವಳಿ ಸಡಗರದಲ್ಲಿದ್ದ ಕುಶ್ವಾಹ ಮೇಲೆ ಶರ್ಮಾ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಆದರೆ ಗುರಿ ತಪ್ಪಿದೆ. ಹೀಗಾಗಿ ಮೂವರು ಆತನ ಮೇಲೆ ಮುಗಿಬಿದ್ದಿದ್ದಾರೆ ಮತ್ತು ಚಾಂದ್ನಿ ಹರಿತವಾದ ಆಯುಧದಿಂದ ಇರಿದಿದ್ದಾಳೆ.
 
ಜನೇವರಿ ತಿಂಗಳಲ್ಲಿ ಜ್ಯೋತಿ ತಂದೆಯ ಇಚ್ಛೆಗೆ ವಿರುದ್ಧವಾಗಿ ಶರ್ಮಾನನ್ನು ಮದುವೆಯಾಗಿದ್ದಳು. ತಮ್ಮ ತಂದೆ ಆಸ್ತಿ ಮಾರಿ 1 ಕೋಟಿ ರೂಪಾಯಿಯನ್ನು ಪಡೆದಿದ್ದಾರೆ ಎಂದು ತಿಳಿದ ಕೂಡಲೇ ಸಹೋದರಿಯರು ಅದನ್ನು ತಮಗಿಬ್ಬರಿಗೆ ಹಂಚೆಂದು ಹಠ ಹಿಡಿದಿದ್ದಾರೆ. ಆದರೆ ನಿಮಗೆ ಒಂದು ರೂಪಾಯಿಯನ್ನು ಸಹ ಕೊಡಲಾರೆ ಎಂದು ತಂದೆ ಹೇಳಿದ್ದಾನೆ. 
 
ಇದರಿಂದ ಸಿಟ್ಟಿಗೆದ್ದ ಸಹೋದರಿಯರು ಆತನನ್ನು ಮುಗಿಸಲು ಯೋಜನೆ ರೂಪಿಸಿ, ಆತನನ್ನನು ಮುಗಿಸಿದ್ದಾರೆ. 
 
ಜ್ಯೋತಿ ತಮ್ಮ ತಂದೆ ನಡೆಸುತ್ತಿದ್ದ ಶಾಲೆಯಲ್ಲಿ  ಶಿಕ್ಷಕಿಯಾಗಿದ್ದರೆ, ಚಾಂದ್ನಿ ವಕೀಲೆಯಾಗಿದ್ದು ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ, ಧನಕನಕ ಲೂಟಿ