Select Your Language

Notifications

webdunia
webdunia
webdunia
webdunia

ಬಾಲಕಿಯ ಕತ್ತು ಸೀಳಿ, ಮುಖಕ್ಕೆ ಆ್ಯಸಿಡ್ ಹಾಕಿದ ಪಾಪಿ!

ಬಾಲಕಿಯ ಕತ್ತು ಸೀಳಿ, ಮುಖಕ್ಕೆ ಆ್ಯಸಿಡ್ ಹಾಕಿದ ಪಾಪಿ!
ಅಮರಾವತಿ , ಬುಧವಾರ, 7 ಸೆಪ್ಟಂಬರ್ 2022 (08:25 IST)
ಅಮರಾವತಿ : ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯ ಕತ್ತು ಸೀಳಿ, ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಭೀಕರ ಕೃತ್ಯ ಎಸಗಿರುವ ಆರೋಪಿ ಬಾಲಕಿಯ ಕುಟುಂಬದ ಹತ್ತಿರದ ಸಂಬಂಧಿ ಎಂದು ಹೇಳಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ದಾಳಿಗೆ ತುತ್ತಾದ ಬಾಲಕಿಯನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ.

ವರದಿಗಳ ಪ್ರಕಾರ ಕೃತ್ಯ ಎಸಗಿರುವ ಆರೋಪಿ ಸಂತ್ರಸ್ತೆಯ ಹತ್ತಿರದ ಸಂಬಂಧಿಯಾಗಿದ್ದು, ಹಣದ ಆಸೆಯಿಂದ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.

ಸೋಮವಾರ ಮಧ್ಯಾಹ್ನ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಆತ ಕಳ್ಳತನಕ್ಕಾಗಿ ಬಂದಿದ್ದ. ಮನೆಯೊಳಗೆ ಹೊಕ್ಕ ಆರೋಪಿ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿ, ಕತ್ತು ಕುಯ್ದಿದ್ದಾನೆ ಎನ್ನಲಾಗಿದೆ. 

ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಭಾರತೀಯ ದಂಡಸಂಹಿತೆ(ಐಪಿಸಿ) ಹಾಗೂ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೊದಲ ಕೋವಿಡ್ ಲಸಿಕೆಗೆ ಅನುಮೋದನೆ