Select Your Language

Notifications

webdunia
webdunia
webdunia
webdunia

ಸಾದ್-ಬಿಜೆಪಿ ಮೈತ್ರಿಕೂಟದ ವಿರುದ್ಧ ನವಜೋತ್ ಸಿಂಗ್ ಸಿದ್ದು ವಾಗ್ದಾಳಿ

ಸಾದ್-ಬಿಜೆಪಿ ಮೈತ್ರಿಕೂಟದ ವಿರುದ್ಧ ನವಜೋತ್ ಸಿಂಗ್ ಸಿದ್ದು ವಾಗ್ದಾಳಿ
ಅಮೃತ್‌ಸರ್ , ಶುಕ್ರವಾರ, 29 ಜುಲೈ 2016 (14:35 IST)
ಪಂಜಾಬ್ ರಾಜಕಾರಣದಿಂದ ದೂರ ಉಳಿಯುವಂತಾಗಲು ಉಪಮುಖ್ಯಮಂತ್ರಿ ಸುಖ್ಬೀರ್ ಬಾದಲ್ ನೇರ ಕಾರಣ ಎಂದು ಆರೋಪಿಸಿದ ಮಾಜಿ ರಾಜ್ಯಸಭೆ ಸದಸ್ಯ ನವಜೋತ್ ಸಿಂಗ್ ಸಿದ್ದು ಆರೋಪಿಸಿದ್ದಾರೆ.
 
ಸಿದ್ದು ಅವರೊಂದಿಗೆ ಸೌಹಾರ್ದಯುತ ಸಂಬಂಧವಿತ್ತು. ಮೈತ್ರಿಯ ಬಗ್ಗೆ ಸಿದ್ದು ದಂಪತಿಗಳಿಗೆ ಯಾವ ಸಮಸ್ಯೆಯಿತ್ತು ಎನ್ನುವುದು ಗೊತ್ತಾಗಿಲ್ಲ. ನಮ್ಮ ನೆರವಿಂದ ಅವರು ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದ್ದರು ಎನ್ನುವ ಸುಖ್ಬೀರ್ ಹೇಳಿಕೆಗೆ ಸಿದ್ದು ಪ್ರತಿಕ್ರಿಯೆ ನೀಡಿದ್ದಾರೆ.
 
ಸುಖ್ಬೀರ್ ಬಾದಲ್ ತಮ್ಮ ಪತ್ನಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ನನ್ನನ್ನು ಮತ್ತು ಸಾದ್ ಪಕ್ಷದ ಸಂಸದ ರತ್ತನ್ ಸಿಂಗ್ ಅಜ್ನಾಲಾ ಅವರನ್ನು ಕಡೆಗೆಣಿಸಲಾಯಿತು. ಶಾಹೀದ್ ಭಗತ್ ಸಿಂಗ್ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಕೂಡಾ ಅವಕಾಶ ಕೊಡಲಿಲ್ಲ. ಅಮೃತ್‌ಸರ್ ಅಭಿವೃದ್ಧಿ ಕುರಿತಂತೆ ನಡೆದ ಸಭೆಗಳಿಗೂ ಕೂಡಾ ನನಗೆ ಆಹ್ವಾನ ನೀಡಲಿಲ್ಲ ಎಂದು ಆರೋಪಿಸಿದರು. 
 
ತಾವು ಸಂಸದರಾಗಿದ್ದಾಗ ಜಾರಿಗೆ ತರಲು ಉದ್ದೇಶಿಸಿದ್ದ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಭಂಡಾರಿ ಸೇತುವೆ ಅಗಲೀಕರಣ, ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಫ್ಲೈಓವರ್ ಮತ್ತು ಅಂಡರ್‌ಪಾಸ್ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ನೆನೆಗುದಿಗೆ ಹಾಕಲಾಯಿತು ಎಂದು ಕಿಡಿಕಾರಿದರು.
 
ಸತತ ಮೂವರು ಅವಧಿಗೆ ಅಮೃತ್‌ಸರ್‌ದಿಂದ ಸಂಸದರಾಗಿ ಜಯಗಳಿಸಿದ್ದರೂ, ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಬದಲಿಗೆ ಅರುಣ್ ಜೇಟ್ಲಿಗೆ ಟಿಕೆಟ್ ನೀಡಲಾಯಿತು ಎಂದು ನವಜೋತ್ ಸಿಂಗ್ ಸಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಸೋದರಳಿಯನಂತೆ ಪೋಸ್ ನೀಡಿ ಬಿಜೆಪಿ ಶಾಸಕನಿಗೆ 80 ಸಾವಿರ ವಂಚಿಸಿದ ಭೂಪ