Webdunia - Bharat's app for daily news and videos

Install App

ಬಾಯಿಮುಚ್ಚು, ಇಲ್ಲಾಂದ್ರೆ ಕಿಡ್ನ್ಯಾಪ್ ಮಾಡಿ ರೇಪ್ ಎಸಗುತ್ತೇನೆ: ಮಹಿಳಾ ಪ್ರಯಾಣಿಕಳಿಗೆ ಕ್ಯಾಬ್ ಚಾಲಕನ ಬೆದರಿಕೆ

Webdunia
ಗುರುವಾರ, 7 ಜುಲೈ 2016 (18:02 IST)
ಬಾಯಿ ಮುಚ್ಚದಿದ್ದಲ್ಲಿ ಕಿಡ್ನಾಪ್ ಮಾಡಿ ರೇಪ್ ಎಸಗಿ ಬಿಸಾಕುತ್ತೇನೆ ಎಂದು ಮಹಿಳಾ ಪ್ರಯಾಣಿಕಳೊಬ್ಬಳಿಗೆ ಕ್ಯಾಬ್ ಚಾಲಕ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
 
27 ವರ್ಷದ ಮಹಿಳೆ ರಾತ್ರಿ ಸುಮಾರು 10 ಗಂಟೆಗೆ ಜೆಡಿ ಬ್ಲಾಕ್‌ನ ಸಾಲ್ಟ್ ಲೇಕ್‌ನಿಂದ ಕ್ಯಾಬ್ ಬುಕ್ ಮಾಡಿದ್ದಳು ಎನ್ನಲಾಗಿದೆ. ಆದರೆ, ಯಾವುದೇ ಕಾರಣವಿಲ್ಲದೇ ಕ್ಯಾಬ್ ಚಾಲಕ ಮಹಿಳೆಗೆ ಸುಮ್ಮನಿರದಿದ್ದಲ್ಲಿ ಅಪಹರಣ ಮಾಡಿ ರೇಪ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.

 ಚಾಲಕನ ವರ್ತನೆ ಮತ್ತು ಉದ್ದೇಶದಿಂದ ಆಘಾತಗೊಂಡ ಮಹಿಳೆ ಚಲಿಸುತ್ತಿರುವ ಕಾರಿನಿಂದಲೇ ಜಂಪ್ ಮಾಡಿ ಹೊರಗೆ ಹಾರಿದ್ದಾಳೆ. ಆದಾಗ್ಯೂ, ಕ್ಯಾಬ್ ಚಾಲಕ ಕಾರು ಮತ್ತೆ ರಿವರ್ಸ್ ತೆಗೆದುಕೊಂಡು ಆಕೆಯ ಮೇಲೆ ಹರಿಸಲು ಪ್ರಯತ್ನಿಸಿದ್ದಾನೆ. 
 
28 ವರ್ಷ ವಯಸ್ಸಿನ ಕಾರು ಚಾಲಕ ಸಂತು ಪರ್ಮಾನಿಕ್‌ನನ್ನು ನಂತರ ಪೊಲೀಸರು ಬಂಧಿಸಿ, ಲೈಂಗಿಕ ಕಿರುಕುಳ ಮತ್ತು ಅಪರಾಧಿಕ ಉದ್ದೇಶದ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. 
 
ಮಹಿಳಾ ಪ್ರಯಾಣಿಕಳ ಪ್ರಕಾರ, ಕಾರಿನಲ್ಲಿ ನನ್ನ ಗೆಳತಿಯಿರುವವರೆಗೆ ಎಲ್ಲವು ಚೆನ್ನಾಗಿತ್ತು. ಆದರೆ,ನನ್ನ ಗೆಳತಿ ಅರಣ್ಯ ಭವನದಲ್ಲಿ ಇಳಿದಕೂಡಲೇ ಚಾಲಕ ಕಾರನ್ನು ವೇಗವಾಗಿ ಚಲಾಯಿಸಿ ನಾನು ಹೋಗಬೇಕಾಗಿದ್ದ ದಾರಿಗೆ ವಿರುದ್ಧವಾಗಿ ಕಾರು ತಿರುಗಿಸಿದ್ದಾನೆ.
 
ರಸ್ತೆ ನಿರ್ಜನವಾಗಿದ್ದರಿಂದ ಜೋರಾಗಿ ಕೂಗಿಕೊಂಡರು ಯಾರು ಬಾರದಿದ್ದಾಗ ಮಹಿಳೆ, ಚಲಿಸುತ್ತಿರುವ ಕಾರಿನಿಂದಲೇ ಹೊರಗೆ ಹಾರಿದ್ದಾಳೆ. ಮಾರನೇ ದಿನ ಕಾರು ಚಾಲಕ , ಉಬೇರ್ ಕಂಪೆನಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿಗೆ ಬಂದ ಅಮಿತ್ ಶಾ ಏನು ಹೇಳಿದ್ರು: ಗುಟ್ಟು ಬಿಟ್ಟು ಕೊಟ್ಟ ಬಿವೈ ವಿಜಯೇಂದ್ರ

Arecanut price today: ಇಂದಿನ ಅಡಿಕೆ, ಕಾಳುಮೆಣಸು ಮಾರುಕಟ್ಟೆ ದರ ಹೇಗಿದೆ ನೋಡಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸರ್ಕಾರಿ ನೌಕರರು, ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್

ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

ಮುಂದಿನ ಸುದ್ದಿ