Select Your Language

Notifications

webdunia
webdunia
webdunia
webdunia

ನೋಟು ನಿಷೇಧದ ಅಲ್ಪಾವಧಿಯ ನೋವು ದೀರ್ಘಾವಧಿಗೆ ಲಾಭ ತರಲಿದೆ: ಪ್ರಧಾನಿ ಮೋದಿ

ನೋಟು ನಿಷೇಧದ ಅಲ್ಪಾವಧಿಯ ನೋವು ದೀರ್ಘಾವಧಿಗೆ ಲಾಭ ತರಲಿದೆ: ಪ್ರಧಾನಿ ಮೋದಿ
ನವದೆಹಲಿ , ಗುರುವಾರ, 8 ಡಿಸೆಂಬರ್ 2016 (15:42 IST)
500 ಮತ್ತು 1000 ರೂ ನೋಟು ನಿಷೇಧದ ನೋವು ಅಲ್ಪಾವಧಿಗೆ ನೋವು ತರಬಹುದು. ಆದರೆ, ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
 
ಸರಣಿ ಟ್ವೀಟ್ ಮಾಡಿದ ಮೋದಿ, ನೋಟು ನಿಷೇಧದಿಂದಯಾವ ರೀತಿ ಕಪ್ಪು ಹಣ ನಿಗ್ರಹಿಸಬಹುದು ಎನ್ನುವುದನ್ನು ವಿವರಿಸಿರುವ ಅವರು ಇದರಿಂದ ನಮ್ಮ ದೇಶದ ಬೆನ್ನೆಲೆಬಾದ ರೈತರಿಗೆ, ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.
 
ಆರ್ಥಿಕ ವಹಿವಾಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಗದುರಹಿತ ಪಾವತಿಯನ್ನು ಹೆಚ್ಚಿಸುವ ಐತಿಹಾಸಿಕ ಸುವರ್ಣಾವಕಾಶ ಭಾರತೀಯರಿಗೆ ಬಂದೊದಗಿದೆ ಎಂದು ಟ್ವೀಟ್ ಮಾಡಿದ್ದಾರೆ. 
 
ಕೇಂದ್ರ ಸರಕಾರದ ನಿರ್ಧಾರಗಳು ದೇಶದ ಜನತೆಗೆ ಅಲ್ಪ ಅವಧಿಗೆ ಸಂಕಷ್ಟವನ್ನು ತರಲಿವೆ ಎನ್ನುವುದನ್ನು ಸದಾ ಹೇಳುತ್ತಿರುತ್ತೇನೆ. ಆದರೆ, ಅಲ್ಪಾವಧಿಯ ನೋವು ದೀರ್ಘಾವಧಿಯ ಲಾಭ ತರಲಿದೆ ಎಂದು ಹೇಳಿದ್ದಾರೆ.
 
ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕಪ್ಪು ಹಣ ವಿರುದ್ಧದ ಯಜ್ಞದಲ್ಲಿ ದೇಶದ ಜನತೆ ಭಾಗಿಯಾಗುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್ ಮಹಾಜನ್, ಸಚಿವ ಅನಂತಕುಮಾರ್ ಬಗ್ಗೆ ಅಡ್ವಾಣಿ ಅಸಮಧಾನ