Select Your Language

Notifications

webdunia
webdunia
webdunia
webdunia

ಹೊಸ 1000 ರೂ. ನೋಟಿಗಾಗಿ ಕಾದಿದ್ದವರಿಗೆ ನಿರಾಸೆ!

1000 ರೂಪಾಯಿ
NewDelhi , ಬುಧವಾರ, 22 ಫೆಬ್ರವರಿ 2017 (12:25 IST)
ನವದೆಹಲಿ: ನಿಷೇಧಗೊಂಡ ಹಳೇ 1000 ರೂಪಾಯಿ ನೋಟಿನ ಬದಲಿಗೆ ಸರ್ಕಾರ ಹೊಸ ನೋಟು ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ ಎಂದು ಕಾದಿದ್ದವರಿಗೆ ನಿರಾಸೆ ತರುವ ಸುದ್ದಿ ಬಂದಿದೆ.

 
ಸದ್ಯಕ್ಕೆ 1000 ನೋಟು ಬಿಡುಗಡೆ ಮಾಡುವ ಯೋಜನೆ ನಮ್ಮ ಮುಂದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.  ಸದ್ಯಕ್ಕೆ 500 ರೂಪಾಯಿ ನೋಟುಗಳನ್ನೇ ಹೆಚ್ಚು ತಯಾರಿಸಿ, ಬಿಡುಗಡೆ ಮಾಡುವ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ನಿನ್ನೆಯಷ್ಟೇ ಹೊಸ 1000 ರೂ ನೋಟುಗಳನ್ನು ಬಿಡುಗಡೆ ಮಾಡಲು ಆರ್ ಬಿಐ ಚಿಂತಿಸಿದೆ ಎಂದು ಕೆಲವು ಮೂಲಗಳು ಹೇಳಿದ್ದವು. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯೇ ಸ್ಪಷ್ಟಪಡಿಸುವುದರೊಂದಿಗೆ ಹೊಸ ನೋಟಿಗಾಗಿ ಕಾದಿದ್ದವರಿಗೆ ನಿರಾಸೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವಿಧಾನಸಬೆ ಚುನಾವಣೆಯಲ್ಲಿ ಸ್ಪರ್ಧೆ: ಯಡಿಯೂರಪ್ಪ