ಅಕ್ಷರಶಃ ಜಂಗಲ್ ರಾಜ್ ಎನ್ನಿಸಿಕೊಳ್ಳುತ್ತಿರುವ ಬಿಹಾರದಲ್ಲಿ ಕೊಲೆ ಪ್ರಕರಣಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜ್ಯದಲ್ಲಿ ಮತ್ತೊಬ್ಬ ರಾಜಕಾರಣಿ ಕೊಲೆಯಾಗಿದೆ. ಬಿಜೆಪಿ ನಾಯಕೊಬ್ಬರನ್ನು ಶೂಟ್ ಮಾಡಲಾಗಿದೆ.
ರಾಜ್ಯದ ದಾನಾಪುರದಲ್ಲಿ ಕಮಲ ಪಕ್ಷದ ನಾಯಕ ಅಶೋಕ್ ಜೈಶ್ವಾಲನನ್ನು ಬಿಹಾರದ ದಾನಾಪುರದಲ್ಲಿ ಬುಧವಾರ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ನಾಯಕನ ಹತ್ಯೆಗೆ ಪ್ರತಿಭಟನೆ ಕೈಗೊಂಡಿರುವ ಬಿಜೆಪಿ ಇಂದು ದಾನಾಪುರ ಬಂದ್‌ಗೆ ಕರೆ ನೀಡಿದೆ.
ರಾಜ್ಯದಲ್ಲಿ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿದ್ದು ನಿತೀಶ್ ಕುಮಾರ್ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಕಿಡಿಕಾರುತ್ತಿವೆ.
ನಿನ್ನೆ ಗೋಪಾಲ್‌ಗಂಜ್‌ನಲ್ಲಿ 13 ಜನರು ರಹಸ್ಯವಾಗಿ ಸಾವನ್ನಪ್ಪಿದ್ದು ಈ ದುರಂತಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಣೆ ಎಂದು ವಿರೋಧಪಕ್ಷಗಳು ಕಿಡಿಕಾರುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .