Select Your Language

Notifications

webdunia
webdunia
webdunia
webdunia

ಶಾಕಿಂಗ್! ಭಾರತೀಯ ಸೇನೆಗೆ ಚೀನಾದ ಕಳಪೆ ಬಿಡಿಭಾಗಗಳ ಗನ್?!

ಶಾಕಿಂಗ್! ಭಾರತೀಯ ಸೇನೆಗೆ ಚೀನಾದ ಕಳಪೆ ಬಿಡಿಭಾಗಗಳ ಗನ್?!
NewDelhi , ಶನಿವಾರ, 22 ಜುಲೈ 2017 (11:12 IST)
ನವದೆಹಲಿ: ಭಾರತದಲ್ಲಿದ್ದುಕೊಂಡೇ ಭಾರತೀಯ ಸೇನೆಗೆ ಕಳಪೆ ಗನ್ ಗಳ ಪೂರೈಕೆ ಮಾಡುತ್ತಿದ್ದ ಸಂಸ್ಥೆಯೊಂದರ ಅಕ್ರಮ ಇದೀಗ ಬೆಳಕಿಗೆ ಬಂದಿದೆ. ಕಂಪನಿ ವಿರುದ್ಧ ಇದೀಗ ಸಿಬಿಐ ಪ್ರಕರಣ ದಾಖಲಿಸಿದೆ.


ಚೀನಾದಲ್ಲಿ ಉತ್ಪಾದಿಸಿದ ಬಿಡಿಭಾಗಗಳ ಮೇಲೆ ‘ಮೇಡ್ ಇನ್ ಜರ್ಮನಿ’ ಎಂದು ಅಚ್ಚು ಹಾಕಿಸುತ್ತಿದ್ದ ಸಿಧ್ ಸೇಲ್ಸ್ ಸಿಂಡಿಕೇಟ್ ಎಂಬ ಸಂಸ್ಥೆಯ ಅಕ್ರಮ ಇದೀಗ ಬಯಲಾಗಿದೆ. ವಿಶೇಷವೆಂದರೆ ಇದೇ ಕಳಪೆ ಮಟ್ಟದ ಚೀನಾ ಉತ್ಪನ್ನಗಳು ಭಾರತೀಯ ಯೋಧರು ಬಳಸುವ ಬೋಫೋರ್ಸ್ ಗನ್ ಗಳಿಗೆ ಬಳಕೆಯಾಗುತ್ತಿತ್ತು.

ಇದೇ ರೀತಿ ಚೀನಾದ ಕಳಪೆ ಉತ್ಪನ್ನಗಳನ್ನು ಗನ್ ತಯಾರಿಕೆಗೆ ನೀಡುತ್ತಿದ್ದ ಪಂಜಾಬ್ ಮೂಲದ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡುವ ಯೋಧರಿಗೆ ಇಂತಹ ಕಳಪೆ ಮಟ್ಟದ ಉತ್ಪನ್ನಗಳಿಂದ ತಯಾರಿಸುತ್ತಿರುವ ಗನ್ ಗಳನ್ನು ಪೂರೈಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯಕ್ಕೆ ಬ್ರೇಕ್