Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕನ ಮೇಲೆ ಯುವತಿಯಿಂದ ಅತ್ಯಾಚಾರ: ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಬೆದರಿಕೆ

ಅಪ್ರಾಪ್ತ ಬಾಲಕನ ಮೇಲೆ ಯುವತಿಯಿಂದ ಅತ್ಯಾಚಾರ: ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಬೆದರಿಕೆ
ಲಕ್ನೊ , ಬುಧವಾರ, 31 ಆಗಸ್ಟ್ 2016 (14:10 IST)
ಅಪ್ರಾಪ್ತ ಬಾಲಕಿಯರ ಮೇಲೆ ಪುರುಷರಿಂದ ಅತ್ಯಾಚಾರದ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ 23 ವರ್ಷದ ಯುವತಿಯೊಬ್ಬಳು ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ.  ಈ ಯುವತಿ ಬಾಲಕನ ಜತೆ ನಗ್ನವಾಗಿರುವ ಚಿತ್ರಗಳನ್ನು  ಎಂಎಂಎಸ್ ಕೂಡ ಮಾಡಿ ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬಾಲಕನಿಗೆ ಬೆದರಿಕೆ ಹಾಕಿದಳು. 
 
ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು,  16 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಯುವತಿಯ ಮೇಲೆ ಕೇಸ್ ದಾಖಲಿಸಲಾಗಿದೆ.
 
 ಬಾಲಕನ ಜತೆ ಸಲಿಗೆಯಿಂದಿರುವುದನ್ನು ಚಿತ್ರೀಕರಿಸಿಕೊಂಡಿದ್ದ ಯುವತಿ, ಬಾಲಕನನ್ನು ಕೆಲವು ಕಾಲ ದುರ್ಬಳಕೆ ಮಾಡಿಕೊಂಡಿದ್ದಳು. ಬಾಲಕ ತನ್ನನ್ನು ಮದುವೆಯಾಗದಿದ್ದರೆ  ಬಾಲಕನ ಜತೆ ಸಲಿಗೆಯಿಂದಿರುವ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.

 ನಾವು ಅವರಿಬ್ಬರ ನಡುವೆ ಟೆಲಿಫೋನ್ ದಾಖಲೆಗಳನ್ನು, ಎಸ್‌ಎಂಎಸ್ ಮತ್ತು ವಾಟ್ಸಾಪ್ ವಿನಿಮಯಗಳನ್ನು ಪರಿಶೀಲಿಸಿದ್ದೇವೆ. ಮಹಿಳೆ ಬಾಲಕನನ್ನು ತನ್ನ ಜತೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಂತೆ ಕಾಣುತ್ತದೆ ಎಂದು ಪೊಲೀಸರು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಒರಾಯಿನ್ ಮಾಲ್ ಒಡೆಯನ ಸವಾಲ್