ಹೆಂಡತಿ ಮನೆಗೆ ವಾಪಾಸ್ ಬಂದಾಗ ಕಾದಿತ್ತು ಶಾಕ್!?

Webdunia
ಶನಿವಾರ, 19 ಫೆಬ್ರವರಿ 2022 (16:29 IST)
ನವದೆಹಲಿ : ದೆಹಲಿಯ ಬುರಾರಿ ಏರಿಯಾದಲ್ಲಿ ಯುವತಿಯೊಬ್ಬಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆಕೆಯ ಅರೆ ಬೆತ್ತಲೆ ಶವ ಪತ್ತೆಯಾಗಿದೆ.
 
ಬುರಾರಿ ಪ್ರದೇಶದ ಕೌಶಿಕ್ ಎನ್ಕ್ಲೇವ್ನಲ್ಲಿ ಯುವತಿಯನ್ನು ಕೊಲೆ  ಮಾಡಿದ ಆರೋಪಿಯನ್ನು ಅಮನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯ ಹೆಂಡತಿ ತನ್ನ ಸಂಬಂಧಿಕರನ್ನು ಭೇಟಿಯಾಗಲು ಮನೆಯಿಂದ ಹೊರಗೆ ಹೋಗಿದ್ದರು.

ಇದೇ ಸಂದರ್ಭವನ್ನು ಬಳಸಿಕೊಂಡ ಆತ ತನ್ನ ಹೆಂಡತಿ ಮನೆಯಿಂದ ಹೊರಗೆ ಹೋದ ನಂತರ ಯುವತಿಯನ್ನು ಮನೆಗೆ ಆಹ್ವಾನಿಸಿದ್ದ. ಆದರೆ, ಆತನ ಹೆಂಡತಿ ಮನೆಗೆ ವಾಪಾಸಾದ ನಂತರ ಆ ಯುವತಿಯ ಶವ ಅರೆ ನಗ್ನ ಸ್ಥಿತಿಯಲ್ಲಿ ಬೆಡ್ರೂಂನ ಹಾಸಿಗೆ ಮೇಲೆ ಬಿದ್ದಿರುವುದನ್ನು ಕಂಡು ಆಘಾತಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡ ಬುರಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಅಮನ್ ತನ್ನ ಪತ್ನಿ ಪ್ರಿಯಾಂಕಾ ರಾವತ್ ಜೊತೆ ಕೌಶಿಕ್ ಎನ್ಕ್ಲೇವ್ನಲ್ಲಿರುವ ಫ್ಲಾಟ್ನಲ್ಲಿ ವಾಸಿಸುತ್ತಿದ್ದ. ಯುವತಿಯ ಶವ ಆತನ ಮನೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಮನ್ ಅವರ ಪತ್ನಿ ಪ್ರಿಯಾಂಕಾ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅವರು ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗಿದಾಗ ಹಾಸಿಗೆಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ ಯುವತಿಯ ಶವವನ್ನು ಕಂಡು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದರು. ಮೃತ ಯುವತಿ ನಾಥುಪುರ ಪ್ರದೇಶದ ನಿವಾಸಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಮೃತಳ ತಂದೆಗೆ ಮಾಹಿತಿ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ