Select Your Language

Notifications

webdunia
webdunia
webdunia
webdunia

ಶಸ್ತ್ರಾಸ್ತ್ರ ತರಬೇತಿ ಶಿಬಿರ: ಬಜರಂಗದಳವನ್ನು ಬೆಂಬಲಿಸಿದ ಶಿವಸೇನೆ

ಶಸ್ತ್ರಾಸ್ತ್ರ ತರಬೇತಿ ಶಿಬಿರ: ಬಜರಂಗದಳವನ್ನು ಬೆಂಬಲಿಸಿದ ಶಿವಸೇನೆ
ಮುಂಬೈ , ಬುಧವಾರ, 25 ಮೇ 2016 (16:22 IST)
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿರುವುದನ್ನು ಶಿವಸೇನೆ ಸಮರ್ಥಿಸಿಕೊಂಡಿದ್ದು, ಭಯೋತ್ಪಾದನೆಯ ವಿರುದ್ಧ ಹೋರಾಡಲು ಶಸ್ತಾಸ್ತ್ರ ತರಬೇತಿ ಅಗತ್ಯವಾಗಿದೆ ಎನ್ನುವುದು ಬಾಳಾ ಠಾಕ್ರೆ ಅವರ ದೂರದೃಷ್ಟಿಯಾಗಿತ್ತು ಎಂದು ಶಿವಸೇನೆ ಹೇಳಿದೆ.
 
ಬಜರಂಗದಳ ಕಾರ್ಯಕರ್ತರು ಶಾಂತಿ ಕದಡಿ, ಕೋಮುಸಾಮರಸ್ಯಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಕ್ರಮದ ಬಗ್ಗೆ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
 
ನಮ್ಮ ದೇಶದಲ್ಲಿ ಜೈಷ್- ಎ-ಮೊಹಮ್ಮದ್, ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆಗಳ ಅಡಗುತಾಣಗಳಿವೆ. ಉಗ್ರಗಾಮಿಗಳು ಅಡಗುತಾಣಗಳನ್ನು ನಿರ್ಮಿಸಲು ಸರಕಾರದ ಅನುಮತಿ ಪಡೆದಿದ್ದಾರೆಯೇ? ಉಗ್ರರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿರುವವರ ಬಜರಂಗದಳ ಕಾರ್ಯಕರ್ತರ ವಿರುದ್ಧ ಯಾಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. 
 
ಯುವಕರು ಸ್ವಯಂ ರಕ್ಷಣೆಯ ಬಗ್ಗೆ ಶಸ್ತ್ರಾಸ್ತ್ರಗಳ ಬಳಕೆಯನ್ನು ಕಲಿಯುವುದು ಮಹತ್ವದ್ದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
 
ಉತ್ತರಪ್ರದೇಶ ಸರಕಾರ ತುಂಬಾ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು..ಇದೀಗ ಇದೊಂದು ಚುನಾವಣೆ ವಿಷಯವಾಗಿದೆ. ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಶಿಬಿರಗಳನ್ನು ನಡೆಸಲು ಬಿಡುವುದು ಸೂಕ್ತ ಎಂದು ರಾಜ್ಯಪಾಲರು ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಬಳಸುವುದು ತಪ್ಪಲ್ಲ ಎಂದು ಬಾಳಾ ಠಾಕ್ರೆ ಅಭಿಪ್ರಾಯಪಟ್ಟಿದ್ದರು ಎಂದು ತಿಳಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುಂಚೆ ಇಹಲೋಕ ತ್ಯಜಿಸಿದ ಎಐಎಡಿಎಂಕೆ ಶಾಸಕ