ಆಕೆ ಈಗಿಲ್ಲ, ಆದರೂ ಗುರಿಯಾಗಿದ್ದಾಳೆ: ತಾಯಿ ಬಗೆಗಿನ ನಿಂದನೆಗೆ ಮೋದಿ ಭಾವುಕ

Sampriya
ಮಂಗಳವಾರ, 2 ಸೆಪ್ಟಂಬರ್ 2025 (17:02 IST)
ಬಿಹಾರ: ಕಳೆದ ವಾರ ಬಿಹಾರದಲ್ಲಿ ಕಾಂಗ್ರೆಸ್ ನಾಯಕರ 'ಮತದಾರ ಅಧಿಕಾರ ಯಾತ್ರೆ' ವೇಳೆ ತನ್ನ ತಾಯಿಯನ್ನು ನಿಂದಿಸಿರುವುದು ತುಂಬಾನೇ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೋವು ತೋಡಿಕೊಂಡರು. 

ತನ್ನ ದಿವಂಗತ ತಾಯಿ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಆಡಿದ ನಿಂದನೀಯ ಭಾಷೆ ಬಗ್ಗೆ ಪ್ರಧಾನಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.  ಇದು ತುಂಬಾನೇ ನೋವಿನ ಸಂಗತಿ ಎಂದು ಕರೆದರು.

ಬಿಹಾರ ರಾಜ್ಯ ಜೀವಿಕಾ ನಿಧಿ ಶಾಖ್ ಸಹಕಾರಿ ಸಂಘ ಲಿಮಿಟೆಡ್ ಬಿಡುಗಡೆ ಸಮಾರಂಭದಲ್ಲಿ ಈ ವಿಷಯದ ಕುರಿತು ಮಾತನಾಡಿದರು.

ಇದು ಬಿಹಾರದ ಎಲ್ಲಾ ತಾಯಂದಿರು ಮತ್ತು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ತಮ್ಮ ಧ್ವನಿಯನ್ನು ಬಿಚ್ಚಿಟ್ಟರು. 

ಕಳೆದ ವಾರ ಬುಧವಾರ ಬೆಳಿಗ್ಗೆ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೋಟಾರ್‌ಸೈಕಲ್‌ನಲ್ಲಿ ಮುಜಫ್ಫರ್‌ಪುರಕ್ಕೆ ತೆರಳಿದಾಗ ಯಾತ್ರೆ ವೇಳೆ ಮೋದಿ ತಾಯಿ ವಿರುದ್ಧ ನಿಂದನಿಯ ಪದಗಳನ್ನು ಬಳಸಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಆಕ್ರೋಶವನ್ನು ಹೊರಹಾಕಿದ್ದರು. 

ನಿಮ್ಮಂತಹ ಕೋಟಿ ತಾಯಂದಿರ ಸೇವೆ ಮಾಡಲು ನನ್ನ ತಾಯಿ ನನ್ನನ್ನು ಬೇರ್ಪಡಿಸಿದರು. ಈಗ ನನ್ನ ತಾಯಿ ಬದುಕಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕೆಲವು ಸಮಯದ ಹಿಂದೆ 100 ವರ್ಷ ಪೂರೈಸಿದ ನಂತರ ಅವರು ನಮ್ಮೆಲ್ಲರನ್ನು ತೊರೆದರು. ರಾಜಕೀಯಕ್ಕೆ ಸಂಬಂಧವಿಲ್ಲದ ಆ ನನ್ನ ತಾಯಿಯನ್ನು ಆರ್‌ಜೆಡಿ, ಕಾಂಗ್ರೆಸ್ ವೇದಿಕೆಯಿಂದ ನಿಂದಿಸಲಾಯಿತು ಎಂದು ಪ್ರಧಾನಿ ಮೋದಿ ಮಂಗಳವಾರ ಹೇಳಿದರು.

"ಆ ತಾಯಿಯ ತಪ್ಪೇನು."

‘ಭಾರತ ಮಾತೆ’ಯನ್ನು ಅವಮಾನಿಸುವವರಿಗೆ ನನ್ನ ತಾಯಿಯನ್ನು ನಿಂದಿಸುವುದು ಏನೂ ಅಲ್ಲ. ಅಂತಹವರಿಗೆ ಶಿಕ್ಷೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ತನ್ನ ತಾಯಿಯು ತನ್ನನ್ನು ಹೇಗೆ ಬೆಳೆಸಿದಳು ಎಂದು ನೆನಪಿಸಿಕೊಂಡ ಪ್ರಧಾನಿ ಮೋದಿ, ಅವಳು ತನ್ನನ್ನು ಮತ್ತು ಕುಟುಂಬವನ್ನು ಕಡು ಬಡತನದಲ್ಲಿ ಬೆಳೆಸಿದಳು, "ಅವಳು ತನಗಾಗಿ ಎಂದಿಗೂ ಹೊಸ ಸೀರೆಯನ್ನು ಖರೀದಿಸುವುದಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನು ಉಳಿಸುತ್ತಾಳೆ" ಎಂದು ಹೇಳಿದರು.

ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ರಾಜಮನೆತನದಲ್ಲಿ ಜನಿಸಿದ ಈ ಯುವರಾಜರಿಗೆ ಬಡ ತಾಯಿಯ 'ತಪಸ್ಸು' ಮತ್ತು ಅವಳ ಮಗನ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನವರಿಗೆ ಕುರಿ, ಕೋಳಿ ಎಂದೆಲ್ಲಾ ಪ್ರಶ್ನೆ ಕೇಳಬೇಡಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ

ಜಾತಿ ಗಣತಿಯಲ್ಲಿ ಗೊಂದಲವೇ ಹೆಚ್ಚಾಗಿದೆ: ಬಿವೈ ವಿಜಯೇಂದ್ರ

ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ: ಶಾದ್ ಸಿದ್ದಿಕಿ

ನನ್ನ ಒಬ್ಬನನ್ನು ಸಮೀಕ್ಷೆ ಮಾಡಲು ಇಷ್ಟೊಂದು ಜನ ಬೇಕಾ: ವಿ ಸೋಮಣ್ಣ ಕ್ಲಾಸ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments