Select Your Language

Notifications

webdunia
webdunia
webdunia
webdunia

ಶಶಿಕಲಾ ಬೆಂಬಲಿಗರ ಯೂ-ಟರ್ನ್: ಪನ್ನೀರ್ ಸೆಲ್ವಂಗೆ 65 ಶಾಸಕರ ಬೆಂಬಲ

ಶಶಿಕಲಾ ಬೆಂಬಲಿಗರ ಯೂ-ಟರ್ನ್: ಪನ್ನೀರ್ ಸೆಲ್ವಂಗೆ 65 ಶಾಸಕರ ಬೆಂಬಲ
ಚೆನ್ನೈ , ಶನಿವಾರ, 11 ಫೆಬ್ರವರಿ 2017 (18:03 IST)
ಶಶಿಕಲಾ ಬಣದಲ್ಲಿದ್ದ 95 ಶಾಸಕರ ಪೈಕಿ 65 ಶಾಸಕರು ಇದೀಗ ಯೂ-ಟರ್ನ್ ಹೊಡೆದು ಪನ್ನೀರ್ ಸೆಲ್ವಂಗೆ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.
 
ಕಾಂಚೀಪುರಂನ ಕೋವತ್ತೂರ್‌ನ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಶಶಿಕಲಾ ಬಣದ 95 ಶಾಸಕರು, ನಮಗೆ ಶಶಿಕಲಾ ನಾಯಕತ್ವ ಬೇಕಾಗಿಲ್ಲ. ನಮಗೆ ಪನ್ನೀರ್ ಸೆಲ್ವಂ ನಾಯಕತ್ವ ಬೇಕು ಎನ್ನುವ ಪತ್ರಕ್ಕೆ 65 ಶಾಸಕರು ಸಹಿಹಾಕಿದ್ದಾರೆ.
 
ಇದರೊಂದಿಗೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ಇನ್ನಷ್ಟು ಶಾಸಕರ ಬೆಂಬಲ ಹೆಚ್ಚುತ್ತಿದ್ದು ಇಂದು ರಾತ್ರಿ ಸಹಿ ಸಂಗ್ರಹಕ್ಕೆ ಸೆಲ್ವಂ ಮುಂದಾಗಿದ್ದಾರೆ ಎನ್ನಲಾಗಿದೆ..
 
ಇಂದು ಶಿಕ್ಷಣ ಖಾತೆ ಸಚಿವ ಪಾಂಡಿರಾಜನ್ ಸೆಲ್ವಂ ಅವರಿಗೆ ಬೆಂಬಲ ಸೂಚಿಸಿದ ನಂತರ ಎಐಎಡಿಎಂಕೆ ವಕ್ತಾರ ಪೋನ್ನಯನ್ ಕೂಡಾ ಸೆಲ್ವಂಗೆ ಬೆಂಬಲ ಘೋಷಿಸಿದ್ದಾರೆ. ಈಗಾಗಲೇ ಎಐಎಡಿಎಂಕೆ ಅಧ್ಯಕ್ಷ ಮಧುಸೂಧನನ್ ಪನ್ನೀರ್ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಸಾದ ತಿಂದು 150 ಜನ ಆಸ್ಪತ್ರೆ ಪಾಲು