Publish Date: Tue, 18 Jul 2017 (19:42 IST)
Updated Date: Tue, 18 Jul 2017 (19:45 IST)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಣ್ಣಾಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಡಿಐಜಿ ರೂಪಾ ವರದಿ ನೀಡಿದ ಬೆನ್ನಲ್ಲೇ ಶಶಿಕಲಾ ಜೈಲಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಓಡಾಡುತ್ತಿರುವ ವಿಡಿಯೋವೊಂದು ಮಾಧ್ಯಮಗಳಿಗೆ ಸಿಕ್ಕಿದೆ.
ಚೂಡಿದಾರ್ ಧರಿಸಿರುವ ಶಶಿಕಲಾ, ಗೆಳತಿ ಇಳವರಸಿ ಜೊತೆ ಪ್ಯಾಸೇಜ್`ನಲ್ಲಿ ಓಡಾಡುತ್ತಿರುವ ದೃಶ್ಯ ಇದಾಗಿದೆ. ಇದು ಜೈಲಿನ ಸಿಸಿಟಿವಿ ವಿಡಿಯೋ ಎನ್ನಲಾಗುತ್ತಿದ್ದು, ಯಾವ ದಿನ ಸೆರೆಯಾದ ವಿಡಿಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಈಗಾಗಲೇ ಸರ್ಕಾರ ಜೈಲಿನ ಅಕ್ರಮದ ಬಗ್ಗೆ ಡಿಐಜಿ ನೀಡಿರುವ ವರದಿ ಬಗ್ಗೆ ತನಿಖೆಗೆ ಆದೇಶಿಸಿದ್ದು, ತನಿಖೆ ಬಳಿಕವೇ ಸತ್ಯ ಹೊರಬರಬೇಕಿದೆ.