Select Your Language

Notifications

webdunia
webdunia
webdunia
webdunia

ಶರಣಾಗದಿದ್ದರೆ ಶಶಿಕಲಾ ವಿರುದ್ಧ ಬಂಧನ ವಾರಂಟ್

ಶರಣಾಗದಿದ್ದರೆ ಶಶಿಕಲಾ ವಿರುದ್ಧ ಬಂಧನ ವಾರಂಟ್
ಚೆನ್ನೈ , ಮಂಗಳವಾರ, 14 ಫೆಬ್ರವರಿ 2017 (12:53 IST)
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಸುಪ್ರೀಂಕೋರ್ಟ್ ತೀರ್ಪಿನಂತೆ ಕೂಡಲೇ ಬಂಧನಕ್ಕೊಳಗಾಗದಿದ್ದಲ್ಲಿ ವಾರಂಟ್ ಜಾರಿಗೊಳಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಗಳಾದ ಶಶಿಕಲಾ, ಸುಧಾಕರನ್ ಮತ್ತು ಇಳವರಿಸಿ ಇಂದು ಅಥವಾ ನಾಳೆ ಬೆಂಗಳೂರಿನ ಹೈಕೋರ್ಟ್ ಮುಂದೆ ಹಾಜರಾಗಬೇಕಾದ ಅಗತ್ಯವಿದೆ. ಒಂದು ವೇಳೆ, ಕೋರ್ಟ್ ಮುಂದೆ ಹಾಜರಾಗುವಲ್ಲಿ ವಿಳಂಬ ತೋರಿದಲ್ಲಿ ಅವರ ವಿರುದ್ಧ ವಾರಂಟ್ ಹೊರಡಿಸಿ ಬಂಧನಕ್ಕೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.
 
ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಅಪರಾಧಿಗಳು ಶರಣಾಗಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಶಶಿಕಲಾ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವುದರೊಂದಿಗೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
 
ಸುಪ್ರೀಂಕೋರ್ಟ್ ತೀರ್ಪು ಶಶಿಕಲಾ ಬೆಂಬಲಿಗರಿಗೆ ಶಾಪವಾಗಿ ಪರಿಣಮಿಸಿದ್ದರೆ, ಪನ್ನೀರ್ ಸೆಲ್ವಂ ಪಾಳಯದಲ್ಲಿ ಸಂತಸ ಸಂಭ್ರಮದ ಸುನಾಮಿ ಎದ್ದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದಾಗೋಣ ಬನ್ನಿ ಎಂದು ಶಾಸಕರಿಗೆ ಕರೆ ನೀಡಿದ ಪನೀರ್ ಸೆಲ್ವಂ