Webdunia - Bharat's app for daily news and videos

Install App

ಉಗ್ರ ಬುರ್ಹಾನ್ ವಾನಿ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

Webdunia
ಗುರುವಾರ, 2 ಫೆಬ್ರವರಿ 2017 (15:35 IST)
ಕೆಲ ತಿಂಗಳುಗಳ ಹಿಂದೆ ಎನ್‌ಕೌಂಟರ್ ಆದ ಹಿಬ್ಜುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಓದಿದ್ದ ಶಾಲೆಯ ವಿದ್ಯಾರ್ಥಿ ಶಾಹೀರಾ ಅಹಮದ್ 12 ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾಳೆ. 

 
ಶಾಹೀರಾ 500ಅಂಕಗಳಿಗೆ 498 ಅಂಕಗಳನ್ನು ಗಳಿಸಿದ್ದು, ಆಕೆಯ ಸಾಧನೆ ಬಗ್ಗೆ ಶಿಕ್ಷಕ ಸಿಬ್ಬಂದಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
 
ತಾನು NEET ಪರೀಕ್ಷೆಗೆ ಹಾಜರಾಗಲು ಬಯಸುವುದಾಗಿ ಶಾಹೀರಾ ಹೇಳಿದ್ದಾಳೆ. 
 
ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿರುವ ಶಾಹೀರಾ ತಂದೆ, ಕಠಿಣ, ಕ್ರಮಬದ್ಧ ಅಧ್ಯಯನ ನಡೆಸುವಂತೆ ಸದಾ ಆಕೆಗೆ ಸಲಹೆ ನೀಡುತ್ತಿದ್ದೆ ಎಂದಿದ್ದಾರೆ. 
 
ಮತ್ತೊಂದು ಗಮನಾರ್ಹ ವಿಷಯವೇನೆಂದರೆ ಶಾಹೀರಾ ಬುರ್ಹಾನ್ ವಾನಿ ತವರು ಪ್ರದೇಶದವಳೇ ಆಗಿದ್ದಾಳೆ. 
 
ಜುಲೈ 8, 2016ರಲ್ಲಿ ಬುರ್ಹಾನ್ ವಾನಿಯನ್ನು ಎನ್‌ಕೌಂಟರ್ ಮಾಡಲಾಗಿತ್ತು. ಆತನ ಹತ್ಯೆಯ ಬಳಿಕ ಬರೊಬ್ಬರಿ 5 ತಿಂಗಳು ಕಣಿವೆನಾಡಿನಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿ ನಡೆದಂತ ಗಲಭೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದರು.
 
ಈ ಉದ್ರಿಕ್ತ ಪರಿಸ್ಥಿತಿಗೆ ಪ್ರತ್ಯೇಕತಾವಾದಿಗಳು ಮತ್ತು ಪಾಕ್ ಕುಮ್ಮಕ್ಕೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments