Webdunia - Bharat's app for daily news and videos

Install App

ಉ.ಪ್ರದೇಶ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವರುಣ್ ಗಾಂಧಿಗೆ ಸ್ಥಾನ

Webdunia
ಗುರುವಾರ, 2 ಫೆಬ್ರವರಿ 2017 (14:55 IST)
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವರುಣ್ ಗಾಂಧಿಯವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
 ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಾಲ್ಕು ಹಂತದಲ್ಲಿ ನಡೆಯಲಿದ್ದು ಆರಂಭದಲ್ಲಿ ವರುಣ್ ಗಾಂಧಿಯನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿತ್ತು.
 
ಬಿಜೆಪಿಯ 40 ಸ್ಟಾರ್ ಪ್ರಚಾರಕರಲ್ಲಿ ಸುಲ್ತಾನ್‌ಪುರ್ ಲೋಕಸಭಾ ಕ್ಷೇತ್ರದ ಸಂಸದರಾದ ವರುಣ್ ಗಾಂಧಿ 39ನೇ ಸ್ಥಾನ ಪಡೆದಿದ್ದಾರೆ.
 
ಕೇಂದ್ರ ಸಚಿವೆ ಮೇನಕಾ ಗಾಂಧಿ ಮತ್ತು ಸಂಜಯ್ ಗಾಂಧಿ ಪುತ್ರರಾದ ವರುಣ್ ಗಾಂಧಿಯನ್ನು ಯುವಕರ ಫೈರ್‌ಬ್ರ್ಯಾಂಡ್‌ ಎಂದು ಗುರುತಿಸಲಾಗಿತ್ತು. ಆದರೆ, ಅಮಿತ್ ಶಾ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ವರುಣ್ ಗಾಂಧಿಯನ್ನು ಕಡೆಗೆಣಿಸಲಾಗಿತ್ತು. 
 
ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮುರಳಿ ಮನೋಹರ್ ಜೋಷಿ,ರಾಜನಾಥ್ ಸಿಂಗ್, ಉಮಾ ಭಾರತಿ, ಅರುಣ್ ಜೇಟ್ಲಿ, ಎಂ.ವೆಂಕಯ್ಯ ನಾಯ್ಡು, ಸ್ಮೃತಿ ಇರಾನಿ, ಪಿಯೂಷ್ ಗೋಯಲ್, ವಿ.ಕೆ.ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ನಿತಿನ್ ಗಡ್ಕರಿ ಸ್ಥಾನ ಪಡೆದಿದ್ದಾರೆ.  
 
ಹಿರಿಯ ನಾಯಕರಾದ ಓಂ ಮಾಥುರ್, ವಿನಯ್ ಕಟಿಯಾರ್, ಸ್ವಾಮಿ ಪ್ರಸಾದ್ ಮೌರ್ಯ ಕೂಡಾ ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಾಲಿವುಡ್‌ನ ಖ್ಯಾತ ಹಿರಿಯ ನಟಿ ಹೇಮಾ ಮಾಲಿನಿ, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಕಾಮಿಡಿ ನಟ ರಾಜು ಶ್ರೀವಾಸ್ತವ್, ರಾಜಸ್ಥಾನ ಸಿಎಂ ವಸುಂಧರಾ ರಾಜೇ ಸಿಂಧಿಯಾ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕೂಡಾ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments