Select Your Language

Notifications

webdunia
webdunia
webdunia
webdunia

ನಡುಬೀದಿಯಲ್ಲಿ ಕಾಲೇಜು ಹುಡುಗಿಯರ ಮೈ ಕೈ ಮುಟ್ಟಿ ಎಳೆದಾಡಿದ ಕಾಮುಕರು..!

ನಡುಬೀದಿಯಲ್ಲಿ ಕಾಲೇಜು ಹುಡುಗಿಯರ ಮೈ ಕೈ ಮುಟ್ಟಿ ಎಳೆದಾಡಿದ ಕಾಮುಕರು..!
ಗುರುಗ್ರಾಮ್ , ಗುರುವಾರ, 22 ಜೂನ್ 2017 (18:37 IST)
ಕಾನೂನು ಎಷ್ಟೇ ಕಠಿಣವಾದರೂ ಕಾಮುಕರ ಻ಟ್ಹಾಸಕ್ಕೆ ಬ್ರೇಕ್ ಬೀಳುವ ಹಾಗೆ ಕಾಣುತ್ತಿಲ್ಲ. ನಡುಬೀದಿಯಲ್ಲೇ ಕಾಮುಕರ ಗುಂಪು ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಗುರುಗ್ರಾಮ್`ನ ಎಂ.ಜಿ. ರಸ್ತೆಯಲ್ಲಿ ನಡೆದಿದೆ.

ಸಮೀಪದಲ್ಲಿ ಹೋಗುತ್ತಿದ್ದ ಯುವತಿಯರನ್ನ ಕಾಡಿದ ಕಾಮುಕರು ಕೆಟ್ಟದಾಗಿ ಸನ್ನೆ ಮಾಡಿ ಕರೆದಿದ್ದಾರೆ. ಮುಂದೆ ಹೋಗಲು ಬಿಡದೇಅಡ್ಡಗಟ್ಟಿದ್ದಾರೆ. ಮೈ ಕೈ ಮುಟ್ಟಿ ಅಶ್ಲೀಲ ವರ್ತನೆ ತೋರಿದ್ದಾರೆ. ಸಮೀಪ ಿದ್ದ ಜನ ಯಾರೊಬ್ಬರೂ ಹುಡುಗಿಯರ ಸಹಾಯಕ್ಕೆ ಬರಲಿಲ್ಲ.

ಘಟನೆ ಸಂಪೂರ್ಣ ವಿಡಿಯೋ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಮುಕರ ಬೇಟೆಗೆ ಬಲೆ ಬೀಸಿರುವ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮನ್ನಾ ಫ್ಯಾಶನ್: ವೆಂಕಯ್ಯನಾಯ್ಡು ವಿರುದ್ಧ ಸಿಎಂ ಗರಂ