ಶೇರುಪೇಟೆಗೆ ಶುಕ್ರದೆಸೆ ಆರಂಭವಾದಂತಾಗಿದೆ. ಸತತ ಐದನೇ ದಿನವೂ ಶೇರುಪೇಟೆ ಚೇತರಿಕೆ ಕಂಡಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ 117 ಪಾಯಿಂಟ್‌ಗಳ ಏರಿಕೆ ಕಂಡಿದೆ.
ಕಳೆದ ನಾಲ್ಕು ದಿನಗಳ ಅವಧಿಯ ವಹಿವಾಟಿನ ಮುಕ್ತಾಯಕ್ಕೆ 1423.24 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 117 ಪಾಯಿಂಟ್‌ಗಳ ಏರಿಕೆಯಾಗಿ 26,770.42 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 38.20 ಪಾಯಿಂಟ್‌ಗಳ ಏರಿಕೆ ಕಂಡು 8,194.85 ಅಂಕಗಳಿಗೆ ತಲುಪಿದೆ.
ಕೋಲ್ ಇಂಡಿಯಾ, ಎಸ್‌ಬಿಐ, ಟಾಟಾ ಮೋಟಾರ್ಸ್, ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಆದಾನಿ ಪೋರ್ಟ್ಸ್, ಡಾ.ರೆಡ್ಡಿ ಲ್ಯಾಬ್, ಐಟಿಸಿ, ಹೀರೋ ಮೋಟಾರ್ ಕಾರ್ಪೋರೇಶನ್, ಟಿಸಿಎಸ್, ಇನ್ಫೋಸಿಸ್ ಮತ್ತು ಓಎನ್‌ಜಿಸಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ
ಜಪಾನ್‌ನ ನಿಕೈ ಶೇರುಪೇಟೆ ಶೇ.0.89 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.86 ರಷ್ಟು ಏರಿಕೆಯಾಗಿದೆ. ಶಾಂಘೈ ಶೇರುಪೇಟೆ ಶೇ.0.19 ರಷ್ಟು ಏರಿಕೆ ಕಂಡಿದೆ.
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.25 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.