ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಬದಲಾವಣೆ ತಾರದಿರುವ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 232 ಪಾಯಿಂಟ್‌ಗಳ ಚೇತರಿಕೆ ಕಂಡಿದೆ
ಬ್ಯಾಂಕಿಂಗ್ ಮತ್ತು ರಿಯಲ್ಟಿ ಶೇರುಗಳು ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 232.22 ಪಾಯಿಂಟ್‌ಗಳ ಏರಿಕೆ ಕಂಡು 27,009.67 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 65.40 ಪಾಯಿಂಟ್‌ಗಳ ಏರಿಕೆ ಕಂಡು 8,266.45, ಅಂಕಗಳಿಗೆ ತಲುಪಿದೆ.
ಐಟಿಸಿ, ಸನ್‌ಫಾರ್ಮಾ, ಹಿಂದ್ ಯುನಿಲಿವರ್, ಟಾಟಾ ಸ್ಟೀಲ್, ಎಲ್‌ಆಂಡ್‌ಟಿ, ಲುಪಿನ್, ಬಿಎಚ್‌ಇಎಲ್, ಒಎನ್‌ಜಿಸಿ ಮತ್ತು ಆದಾನಿ ಪೋರ್ಟ್ಸ್ ಶೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿವೆ.
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.58 ರಷ್ಟು ಏರಿಕೆಯಾಗಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.07 ರಷ್ಟು ಚೇತರಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಶೇ,1.42 ರಷ್ಟು ಏರಿಕೆಯಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.