Webdunia - Bharat's app for daily news and videos

Install App

ಪರಮೇಶ್ವರ ನಾಯ್ಕ್ ವಿರುದ್ಧ ಫೇಸ್‌ಬುಕ್ ಸಮರ ಮುಂದುವರೆಸಿದ ಅನುಪಮಾ

Webdunia
ಮಂಗಳವಾರ, 7 ಜೂನ್ 2016 (18:52 IST)
ಮೂರು ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರ ಫೇಸ್‌ಬುಕ್ ಸಮರ ಮುಂದುವರೆದಿದ್ದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅವರ ವಿರುದ್ಧ ಅವರು ಮೂರನೆಯ ಸ್ಟೇಟಸ್ ಹಾಕಿದ್ದಾರೆ. 

 
ನಾಯ್ಕ ವಿರುದ್ಧ ಅವರು ಮಾಡಿರುವ ವ್ಯಂಗ್ಯವಾದ ಪೋಸ್ಟ್ ಹೀಗಿದೆ:
 
*ಪರಮೇಶ್ವರ್ ನಾಯ್ಕರು ರಾಜೀನಾಮೆ ನೀಡುವುದು ತಡವಾಗಿ ಜನರು ದಂಗೆ ಏಳುವ ಸಂಭವ ಇರುವುದರಿಂದ ಕಾನೂನು, ಸುವ್ಯವಸ್ಥೆ ಕಾಪಾಡಲು ಪ್ರತಿಬಂಧಕವಾಗಿ ನಾಯ್ಕರನ್ನು ಬಂಧಿಸಲಾಗಿದೆ.
#MySympathiesToShashidharVenugopalArrest
#ಬೃಹನ್ನಳೆಯರು.*
 
ಇಂದು ನಸುಕಿನ ಜಾವ ಸಹ ಅವರು ಪರಮೇಶ್ವರ ನಾಯ್ಕ ಅವರಿಗೆ ನೇರ ಸವಾಲು ಹಾಕಿ ಸ್ಟೇಟಸ್ ಪ್ರಕಟಿಸಿದ್ದರು. 
 *ಪಿ ಟಿ ಪರಮೇಶ್ವರ ನಾಯ್ಕರೇ ನಾನು ರಾಜೀನಾಮೆ ನೀಡಿದ್ದೇನೆ. ನೀವು ಯಾವಾಗ ರಾಜೀನಾಮೆ ನೀಡುತ್ತೀರಾ?
‪#‎WashingPowderNirmaPart2‬*
 
ಮಧ್ಯಾಹ್ನದ ಹೊತ್ತಿಗೆ *CD ಬೇಕೇ, Audio ಬೇಕೇ
‪#‎ಪರಮೇಶಿಪ್ರೇಮಪ್ರಸಂಗಭಾಗ1‬
‪#‎WashingPowderNirmaPart2‬* ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 
 
ಈ ಸ್ಟೇಟಸ್‌ಗಳೆಲ್ಲ ಹಲವಾರು ಪ್ರಶ್ನೆಗಳನ್ನು ಹುಟ್ಟಿ ಹಾಕಿದ್ದು ಪಿ.ಟಿ ಪರಮೇಶ್ವರ ನಾಯ್ಕ್ ಅವರಿಗೂ ಅನುಪಮಾ ರಾಜೀನಾಮೆಗೆ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
 
ರಾಜೀನಾಮೆ ನೀಡಿದ ದಿನದಿಂದ ಈವರೆಗೆ ಅನುಪಮಾ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ಎಕ್ಟಿವ್ ಆಗಿರುವ ಅವರು ಒಂದರ ಹಿಂದೆ ಒಂದು ಪೋಸ್ಟಿಂಗ್, ಸ್ಟೇಟಸ್ ಪ್ರಕಟಿಸುವುದರ ಮೂಲಕ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. 
 
ಲಿಕ್ಕರ್ ಲಾಬಿ ಮಟ್ಟ ಹಾಕಲು ಶತ ಪ್ರಯತ್ನ ನಡೆಸಿದ್ದ ದಕ್ಷ ಅಧಿಕಾರಿ 50 ದಿನಗಳಲ್ಲಿ 16 ಪ್ರಕರಣಗಳನ್ನು ದಾಖಲಿಸಿದ್ದರು. ಅಲ್ಲದೇ 18 ಆರೋಪಿಗಳನ್ನು ಜೈಲಿಗಟ್ಟಿದ್ದರು. ಇದೇ ಅವರ ರಾಜೀನಾಮೆಗೆ ಕಾರಣವಾಯ್ತೇ ಎಂಬ ಸಂಶಯಕ್ಕೆ ಈ ಸ್ಟೇಟಸ್ ಪುಷ್ಠಿ ನೀಡಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

Tiranga Yatra, ಭಾರತೀಯ ಯೋಧರಿಗೆ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ: ಬಿವೈ ವಿಜಯೇಂದ್ರ

ಅಶ್ಲೀಲ ವಿಡಿಯೋಗಳನ್ನು ಹರಿಬಿಡುವುದಾಗಿ ಆನಂದ್‌ ಗುರೂಜಿಗೆ ಬೆದರಿಕೆ: ದಿವ್ಯ ವಸಂತಾ ಸೇರಿ ಇಬ್ಬರ ವಿರುದ್ಧ ದೂರು

ಮುಂದಿನ ಸುದ್ದಿ
Show comments