Webdunia - Bharat's app for daily news and videos

Install App

ಅಮೆರಿಕದಲ್ಲಿ ಭಾರತ ರಾಯಭಾರ ಕಚೇರಿಗೆ ಭದ್ರತೆ

Webdunia
ಶುಕ್ರವಾರ, 24 ಮಾರ್ಚ್ 2023 (18:00 IST)
ಖಾಲಿಸ್ತಾನ ಪರ ಬೆಂಬಲಿಗರು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಮೇಲೆ ದಾಳಿ ಮಾಡಿರುವುದರಿಂದ, ಮತ್ತೆ  ಪ್ರತಿಭಟನೆಗಳು ನಡೆಯಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಚೇರಿಗೆ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊ ಪೊಲೀಸ್ ಡಿಪಾರ್ಟ್‌ಮೆಂಟ್‌ನ ವಿಶೇಷ ದಳದವರು ಭದ್ರತೆ ಕೈಗೊಂಡಿದ್ದಾರೆ.  ಖಾಲಿಸ್ತಾನ ಪರ ಘೋಷಣೆ ಕೂಗುತ್ತಾ ಕಾನ್ಸುಲೇಟ್‌ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು, ಕಚೇರಿ ಆವರಣದಲ್ಲಿ ‘ಖಾಲಿಸ್ತಾನ ಧ್ವಜ’ವನ್ನು ಹಾರಿಸಲು ಯತ್ನಿಸಿದ್ದರು. ನಂತರ ಕಬ್ಬಿಣದ ರಾಡು ಬಳಸಿ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಒಡೆದಿದ್ದರು. ಪಂಜಾಬಿ, ಹಿಂದಿಯಲ್ಲಿ ಖಾಲಿಸ್ತಾನ ಪರ ಘೋಷಣೆ ಕೂಗಿದ್ದ ಉದ್ರಿಕ್ತರು ಪಂಜಾಬ್‌ನಲ್ಲಿ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆಯು ಖಂಡಿತ ಸ್ವೀಕಾರಾರ್ಹ ಅಲ್ಲವೇ ಅಲ್ಲ. ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅಲ್ಲಿನ ಸೌಕರ್ಯಗಳ ರಕ್ಷಣೆಗೆ ನಾವು ಬದ್ಧ ಎಂದು ಶ್ವೇತಭವನದ ಸಂವಹನ ಕಾರ್ಯತಂತ್ರದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ ಜಾನ್‌ ಕಿರ್ಬಿ ಅವರು ತಿಳಿಸಿದ್ದರು. ಹಿಂಸಾಚಾರ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಸರ್ಕಾರವು ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್‌ಸಿಂಗ್‌ ಬಂಧನಕ್ಕೆ ಕಾರ್ಯಾಚರಣೆ ಶುರುಮಾಡಿರುವುದೇ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ಮಾಡಲು ಕಾರಣ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಮುಂದಿನ ಸುದ್ದಿ
Show comments