Webdunia - Bharat's app for daily news and videos

Install App

ನೋಟು ನಿಷೇಧ: ಬಿಜೆಪಿಯಲ್ಲಿಯೇ ಭುಗಿಲೆದ್ದ ಭಿನ್ನಮತ, ಮೋದಿ ವಿರುದ್ಧ ಬಿಜೆಪಿ ಸಂಸದರ ಆಕ್ರೋಶ

Webdunia
ಶುಕ್ರವಾರ, 18 ನವೆಂಬರ್ 2016 (15:09 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸಮರ ಸಾರಿ ನೋಟು ನಿಷೇಧ ಜಾರಿಗೊಳಿಸಿರುವ ನಿರ್ಧಾರದ ವಿರುದ್ಧ ಬಿಜೆಪಿಯ ಮುಖಂಡರು ಮತ್ತು ಸಂಸದರೇ ಅಸಮಧಾನ ವ್ಯಕ್ತಪಡಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
 
ಉತ್ತರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಎದುರಾಗಿರುವ ಚುನಾವಣೆಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಸಂಸದರ ಸಭೆ ಕರೆದಿದ್ದರು. ಆದರೆ, ನೋಟ್ ಬ್ಯಾನ್ ಕುರಿತಂತೆ ಬಿಜೆಪಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿಯೇ ಬಿಜೆಪಿ ಸಂಸದರು ನೋಟು ನಿಷೇಧ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಬುಧುವಾರ ನಡೆಯಲಿದ್ದ ಸಭೆಯನ್ನು ಮಾರನೇ ದಿನಕ್ಕೆ ಮುಂದೂಡಲಾಗಿತ್ತು. ಆದರೆ, ಗುರುವಾರದಂದು ಕೂಡಾ ಸಂಸದರು ಸಭೆಗೆ ಹಾಜರಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಅನಾಮಧೇಯರಾಗಿರಲು ಬಯಸಿರುವ ಬಿಜೆಪಿ ಸಂಸದರು ಖಾಸಗಿ ಚಾನೆಲ್‌ಗಳೊಂದಿಗೆ ನೋಟು ನಿಷೇಧ ಕುರಿತಂತೆ ತಮ್ಮ ನೋವು ತೋಡಿಕೊಂಡಿದ್ದು, ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಜನರ ಕೋಪವನ್ನು ಎದುರಿಸಬೇಕಾಗಿದೆ. ಬ್ಯಾಂಕ್‌ ಮತ್ತು ಎಟಿಎಂಗಳಲ್ಲಿ ಹಣ ದೊರೆಯದಿರುವ ಬಗ್ಗೆ ಜನತೆ ನಮ್ಮ ಮನೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ದೇಶಾದ್ಯಂತ ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ಮೋದಿಯವರನ್ನು ಹೊಗಳುತ್ತಿರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಉತ್ತರಪ್ರದೇಶದಲ್ಲಿ ಹಾಕುವಂತೆ ಅಮಿತ್ ಶಾ ಪ್ರಸ್ತಾವನೆ ಸಲ್ಲಿಸಿದ್ದರೂ ಬಿಜೆಪಿ ಸಂಸದರು ಮಾತ್ರ ಮೋದಿ ಬ್ಯಾನರ್‌ಗಳನ್ನು ಹಾಕಿದಲ್ಲಿ ಜನತೆಯ ಆಕ್ರೋಶ ಎದುರಿಸಬೇಕಾಗುತ್ತದೆ ಎನ್ನುವ ಆತಂಕದಿಂದ ತಮ್ಮ ತಣ್ಣನೆಯ ಪ್ರತಿಕ್ರಿಯೆ ತೋರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments