13 ರಾಜ್ಯಗಳು ಬರಗಾಲದಿಂದ ಪೀಡಿತವಾಗಿರುವ ನಡುವೆ, ಭಾರತದ ಮೂಲೆಯೊಂದರಲ್ಲಿ ಸಮುದ್ರ ನೀರಿನಿಂದ ಪ್ರತಿ ದಿನ 6.3 ದಶಲಕ್ಷ ಲೀಟರ್ ಕುಡಿಯುವ ನೀರನ್ನಾಗಿ ಪರಿವರ್ತಿಸುವ ವಿಧಾನವನ್ನು ವಿಜ್ಞಾನಿಗಳು ರೂಪಿಸಿದ್ದಾರೆ. ಇದಲ್ಲದೇ ಕೆಲವು ಸೋಸುವ ವಿಧಾನಗಳನ್ನು ಕೂಡ ಅವರು ಅಭಿವೃದ್ಧಿಪಡಿಸಿದ್ದು, ಇದರಿಂದ ಆರ್ಸೆನಿಕ್ ಮತ್ತು ಯುರೇನಿಯಂ ಹೊಂದಿದ ಭೂಜಲ ಕುಡಿಯಲು ಯೋಗ್ಯವಾಗುವಂತೆ ಮಾಡುತ್ತದೆ.
ತಮಿಳುನಾಡಿನ ಕಲ್ಪಾಕಂನಲ್ಲಿ ಬೃಹತ್ ಘಟಕವೊಂದನ್ನು ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ನಿರ್ಮಿಸಿದ್ದು, ಪರಮಾಣು ಸ್ಥಾವರದ ತ್ಯಾಜ್ಯ ಹಬೆಯನ್ನು ಬಳಸಿಕೊಂಡು ಸಮುದ್ರನೀರನ್ನು ಶುದ್ಧೀಕರಣಗೊಳಿಸುತ್ತದೆ. ಇದರ ಉತ್ಪಾದನಾ ಸಾಮರ್ಥ್ಯವು ಪ್ರತಿ ದಿನ 6.3 ದಶಲಕ್ಷ ಲೀಟರುಗಳಾಗಿವೆ.
ಪ್ರಸಕ್ತ ತಾಜಾ ನೀರನ್ನು ಕುಡಂಕುಲಂ ಪರಮಾಣು ಸ್ಥಾವರದಲ್ಲಿ ಬಳಸಲಾಗುತ್ತದೆ. ಆದರೆ ಶುದ್ಧೀಕರಿಸಿದ ನೀರು ಕೂಡ ತಾಜಾ ನೀರಿನ ರುಚಿಯನ್ನು ಹೊಂದಿದ್ದು, ಉಪ್ಪಿನಂಶವಿಲ್ಲ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ