Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಯ ಮೇಲೆ ಸರ್ಕಾರಿ ಶಾಲಾ ಶಿಕ್ಷಕನಿಂದ ಮೂರು ತಿಂಗಳು ಅತ್ಯಾಚಾರ

School teacher
ತನ್ನ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೇ ಸತತ ಮೂರು ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಝಂಝುನುವನಲ್ಲಿ ನಡೆದಿದೆ. 
 
ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಸುದ್ದಿಯ ಪ್ರಕಾರ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಶಾಲಾ ಆವರಣದಲ್ಲಿ ಮತ್ತು ಶಾಲೆಯ ಹೊರಗಡೆ ಸಹ ಕಾಮುಕ ಶಿಕ್ಷಕ ಅತ್ಯಾಚಾರವೆಸಗಿದ್ದಾನೆ. ಶಾಲಾ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಸಹ ಆಕೆಯನ್ನು ಏನಾದರೂ ನೆಪ ಹೇಳಿ ಕರೆಸಿಕೊಳ್ಳುತ್ತಿದ್ದ ಶಿಕ್ಷಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. 
 
ಪ್ರತಿ ಬಾರಿ ತನ್ನ ಕೀಚಕತನವನ್ನು ಪ್ರದರ್ಶಿಸಿದ ಮೇಲೆ ಆರೋಪಿ ಶಿಕ್ಷಕ ರಾಜೇಶ್ ಶರ್ಮಾ ಈ ಕುರಿತು ಯಾರಿಗಾದರೂ ತಿಳಿಸಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಆಕೆಗೆ ಬೆದರಿಕೆ ಒಡ್ಡುತ್ತಿದ್ದ. ಹೀಗಾಗಿ ಬಾಲಕಿ ಕಳೆದ ಮೂರು ತಿಂಗಳಿಂದ ಆತನ ದೌರ್ಜನ್ಯದ ಕುರಿತು ಯಾರಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. 
 
ಕಳೆದೆರಡು ದಿನಗಳ ಹಿಂದೆ ಪೀಡಿತಳು ಅಸ್ವಸ್ಥಳಾದಾಗ ಆಕೆಯ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಬಾಲಕಿ ತನ್ನ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯನ್ನು ಬಹಿರಂಗ ಪಡಿಸಿದ್ದಾಳೆ. 
 
ಆರೋಪಿಯ ಮೇಲೆ ಐಪಿಸಿ ವಿಭಾಗ 376 (ಅತ್ಯಾಚಾರ) ಮತ್ತು ಪೋಸ್ಕೋ ಕಾಯಿದೆಯಿ ಪ್ರಕರಣವನ್ನು ದಾಖಲಿಸಲಾಗಿದೆ.
 
ತನ್ನ ಕೃತ್ಯದ ಕುರಿತು ಸುದ್ದಿ ಹರಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. 

Share this Story:

Follow Webdunia kannada