Select Your Language

Notifications

webdunia
webdunia
webdunia
webdunia

'ತುಂಬಾ ಫ್ಯಾಶನೇಬಲ್' ಎಂದು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ

'ತುಂಬಾ ಫ್ಯಾಶನೇಬಲ್' ಎಂದು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ
ರಾಯಘಡ , ಶುಕ್ರವಾರ, 11 ನವೆಂಬರ್ 2016 (14:52 IST)
ಅತಿಯಾಗಿ ಫ್ಯಾಷನ್ ಮಾಡಿದ್ದಾರೆಂದು ಶಿಕ್ಷಕರೊಬ್ಬರು 6 ಮಂದಿ ವಿದ್ಯಾರ್ಥಿಗಳ ಕೂದಲನ್ನು ಕಟ್ ಮಾಡಿದ ಖಂಡನೀಯ ಘಟನೆ ಛತ್ತೀಸ್‌ಗಢದ ರಾಯಘಡದಲ್ಲಿ ನಡೆದಿದೆ. ಈ ಕೃತ್ಯವೆಸಗಿರುವ ಶಿಕ್ಷಕ ಈಗ ಪೊಲೀಸ್ ಠಾಣೆಯಲ್ಲಿದ್ದಾರೆ. 
ನಹರ್ಪಲ್ಲಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಭೂಪ್‌ದಿಯೋಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಆರೋಪಿ ಗಣಿತ ಶಿಕ್ಷಕನಾಗಿದ್ದು, ಪುಷ್ಪೇಂದರ್ ಪಟೇಲ್ ಎಂದು ಆತನನ್ನು ಗುರುತಿಸಲಾಗಿದೆ. 
 
ಬಾಲಕಿಯರ ಕೂದಲನ್ನು ಕತ್ತರಿಸಿದಂತೆ ಎಷ್ಟು ಮನವಿ ಮಾಡಿಕೊಂಡರೂ, ಪ್ರತಿಭಟಿಸಿದರೂ ಆತ ಪೊಲೀಸರು ಸ್ಥಳಕ್ಕಾಗಮಿಸುವವರೆಗೂ ಕೂದಲನ್ನು ಕತ್ತರಿಸುವುದನ್ನು ನಿಲ್ಲಿಸಲೇ ಇಲ್ಲ. 
 
ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿಕ್ಷಕ ಅವರು ಅತಿಯಾಗಿ ಫ್ಯಾಷನ್ ಮಾಡುತ್ತಿದ್ದರು. ಓದಿನ ಕಡೆ ಗಮನ ಹರಿಸುತ್ತಿರಲಿಲ್ಲ ಎಂದಿದ್ದಾರೆ.
 
ಘಟನೆಯಿಂದ ದಿಗ್ಭ್ರಾಂತರಾದ ಶಾಲಾ ವ್ಯವಸ್ಥಾಪಕ ಮಂಡಳಿ ಮತ್ತು ಬಾಲಕಿಯರ ಪೋಷಕರು ಪಟೇಲ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಅಪಹರಣಕ್ಕೆ ಯತ್ನ