Select Your Language

Notifications

webdunia
webdunia
webdunia
webdunia

ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಶಶಿಕಲಾ ವಜಾ

ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಶಶಿಕಲಾ ವಜಾ
ಚೆನ್ನೈ , ಮಂಗಳವಾರ, 12 ಸೆಪ್ಟಂಬರ್ 2017 (11:50 IST)
ನಿರೀಕ್ಷೆಯಂತೆ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ. ಅಣ್ಣಾಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಿಎಂ ಪಳನಿ ಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ಈ ಒಮ್ಮತದ ನಿರ್ಧಾರದ ಕೈಗೊಂಡಿದೆ. ವಿಲೀನದ ಸಂದರ್ಭ ಮಾತುಕತೆ ವೇಳೆ ಶಶಿಕಲಾ ಸೇರಿ ಮನ್ನಾರ್ ಗುಡಿ ಗ್ಯಾಂಗ್ aನ್ನ ಪಕ್ಷದ ಹುದ್ದೆಯಿಂದ ಕೆಳಗಿಳಿಸಲು ಪನ್ನೀರ್ ಸೆಲ್ವಂ ಬಣ ಷರತ್ತು ವಿಧಿಸಿತ್ತು. ಅದರಂತೆ ಒಪ್ಪಂದವೂ ಆಗಿತ್ತು. ಅಂದಿನ ಒಪ್ಪಂದದ ಅನ್ವಯವೇ ಇಂದು ನಿರ್ಣಯ ಕೈಗೊಳ್ಳಲಾಗಿದೆ.   

ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಶಿಕಲಾ ಅವರನ್ನ ವಜಾ ಮಾಡಲಾಗಿದ್ದು,  ಟಿಟಿವಿ ದಿನಕರನ್ ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನ ರದ್ದು ಮಾಡಲಾಗಿದೆ. ಜಯಲಲಿತಾ ನಿಧನಕ್ಕೂ ಮುನ್ನ ಪಕ್ಷದ ಜವಾಬ್ದಾರಿ ನೀಡಿದ್ದವರನ್ನ ಮಾತ್ರ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿಗೆ ಕುರಿ ಮಾಂಸದ ಊಟ: ವಿವಾದ ಸೃಷ್ಟಿಸಿದ ಆಸ್ಟ್ರೇಲಿಯಾ ಜಾಹೀರಾತು