Select Your Language

Notifications

webdunia
webdunia
webdunia
webdunia

ಜಯಲಲಿತಾ ಸಾವಿಗೆ ಹೊಸ ಟ್ವಿಸ್ಟ್ ನೀಡಿದ ಶಶಿಕಲಾ ಸಂಬಂಧಿ!

ಜಯಲಲಿತಾ ಸಾವಿಗೆ ಹೊಸ ಟ್ವಿಸ್ಟ್ ನೀಡಿದ ಶಶಿಕಲಾ ಸಂಬಂಧಿ!
Chennai , ಶುಕ್ರವಾರ, 21 ಏಪ್ರಿಲ್ 2017 (10:26 IST)
ಚೆನ್ನೈ: ತಮಿಳುನಾಡಿನಲ್ಲಿ ಈಗ ಶಶಿಕಲಾ ನಟರಾಜನ್ ವಿರೋಧಿ ಅಲೆ ಹೆಚ್ಚಾಗುತ್ತಿರುವಂತೆ ಶಶಿಕಲಾ ಸಂಬಂಧಿಯೊಬ್ಬರು ಆಕೆಯ ಬೆಂಬಲಕ್ಕೆ ಬಂದಿದ್ದಾರೆ. ಶಶಿಕಲಾ ಅಳಿಯ ಜಯಲಲಿತಾ ಸಾವಿನ ಬಗ್ಗೆ ಹೊಸದೊಂದು ಬಾಂಬ್ ಸಿಡಿಸುವುದಾಗಿ ಫೇಸ್ ಬುಕ್ ನಲ್ಲಿ ಪನೀರ್ ಸೆಲ್ವಂಗೆ ಎಚ್ಚರಿಕೆ ನೀಡಿದ್ದಾರೆ.

 
ಅಮ್ಮನ ಸಾವಿನ ಬಗ್ಗೆ ಮಾಹಿತಿ ನೀಡುವ ರಹಸ್ಯದ ವಿಡಿಯೋವೊಂದನ್ನು ಬಿಡುಗಡೆ ಮಾಡುವುದಾಗಿ ಶಶಿಕಲಾ ಅಳಿಯ ಜಯಾನಂದ್ ದಿವಾಕರನ್ ಬೆದರಿಕೆ ಹಾಕಿದ್ದಾರೆ. ಜಯಾನಂದ್ ಶಶಿಕಲಾರನ್ನು ಜಯಾ ಸಾವಿಗೆ ಕಾರಣ ಎನ್ನುವವರ ಪೊರೆ ಕಳಚುವುದಾಗಿ ಹೇಳಿಕೊಂಡಿದ್ದಾರೆ.

ಒಂದೆಡೆ ಅಮ್ಮ ಸಾವಿನ ದವಡೆಯಲ್ಲಿದ್ದರೆ, ಆಕೆಯ ದಯನೀಯ ಪರಿಸ್ಥಿತಿ ಶತ್ರುಗಳು ನೋಡಬಾರದು. ಆ ಮೂಲಕ ಹುಲಿಯಂತಿದ್ದ ಅಮ್ಮನ ಗೌರವಕ್ಕೆ ಧಕ್ಕೆ ಬರದಂತೆ ಶಶಿಕಲಾ ಕಾಪಾಡಿದ್ದರು ಎಂದು ಜಯಾನಂದ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಸಂಶಯವಿದ್ದರೆ ಆಸ್ಪತ್ರೆಯ ವಿಡಿಯೋ ತುಣುಕುಗಳನ್ನೇ ಬಿಡುಗಡೆ ಮಾಡುವುದಾಗಿ ಜಯಾನಂದ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!