Select Your Language

Notifications

webdunia
webdunia
webdunia
webdunia

ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ : ಸುಪ್ರೀಂ

ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ : ಸುಪ್ರೀಂ
ನವದೆಹಲಿ , ಶನಿವಾರ, 22 ಏಪ್ರಿಲ್ 2023 (07:32 IST)
ನವದೆಹಲಿ : ಸಲಿಂಗ ವಿವಾಹಗಳು ನಗರ ಗಣ್ಯರ ಅಥವಾ ಶ್ರೀಮಂತರ ಪರಿಕಲ್ಪನೆಗಳಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
 
ಸಲಿಂಗ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅವರು ಇಂತಹದ್ದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲಿಂಗ ವಿವಾಹಗಳನ್ನು ಅಂಗೀಕರಿಸುವ ಅರ್ಜಿದಾರರು ನಗರ ಗಣ್ಯರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಾರೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್, ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಲೈಂಗಿಕ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗೆಂದು ಇದು ಸಲಿಂಗ ವಿವಾಹ ಪರಿಕಲ್ಪನೆಗಳು ಅಥವಾ ಬೇಡಿಕೆಗಳು ಎಂದು ತೋರಿಸಲು ಸರ್ಕಾರದ ಬಳಿ ಸೂಕ್ತ ಅಂಕಿ ಅಂಶಗಳ ದಾಖಲೆ ಇದೆ ಎಂಬ ಅರ್ಥವಲ್ಲ ಎಂದು ಅವರು ಹೇಳಿದ್ದಾರೆ. 

ಸರ್ಕಾರವು ವ್ಯಕ್ತಿಯ ನಿಯಂತ್ರಣ ಹೊಂದಿರದ ಗುಣಲಕ್ಷಣದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ನೀವು ಅದನ್ನು ಸಹಜ ಗುಣಲಕ್ಷಣಗಳೆಂದು ನೋಡಿದಾಗ, ಅದು ನಗರ ಗಣ್ಯರ ಪರಿಕಲ್ಪನೆಯನ್ನು ವಿರೋಧಿಸುತ್ತದೆ. ಸಲಿಂಗ ವಿವಾಹವು ನಗರ ಗಣ್ಯರ ಪರಿಕಲ್ಪನೆಯಾಗಿದೆ ಎಂದು ತೋರಿಸಲು ಸರ್ಕಾರವು ಯಾವುದೇ ದತ್ತಾಂಶ ಹೊಂದಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಕೋಟೆಯಲ್ಲಿ ‘ಸಾಮ್ರಾಟ್​​​’ ಕಹಳೆ