Select Your Language

Notifications

webdunia
webdunia
webdunia
webdunia

ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಸಚಿವ ಆಜಂಖಾನ್

ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಸಚಿವ ಆಜಂಖಾನ್
ಕಾನ್ಪುರ್ , ಗುರುವಾರ, 30 ಜೂನ್ 2016 (20:13 IST)
ಸಮಾಜವಾದಿ ಪಕ್ಷದ ಸರಕಾರಕ್ಕೆ ಮತ್ತೊಂದು ಸಂಕಷ್ಟದ ಸ್ಥಿತಿ ಎದುರಾಗಿದೆ. ಪ್ರೊಜೆಕ್ಟ್ ಇಂಜಿನಿಯರ್‌ರೊಬ್ಬರಿಗೆ ನಗರಾಭಿವೃದ್ಧಿ ಸಚಿವ ಆಜಂ ಖಾನ್ ಕಪಾಳಮೋಕ್ಷ ಮಾಡಿ ಅಸಭ್ಯ ಶಬ್ದಗಳಿಂದ ನಿಂದಿಸಿದ ಘಟನೆ ವರದಿಯಾಗಿದೆ.
 
ಕಳೆದ ಜೂನ್ 25 ರಂದು ರಾಂಪುರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಫ್ಲೈಓವರ್ ಬ್ರಿಡ್ಜ್ ಕಾಮಗಾರಿ ಪರಿಶೀಲನೆಗಾಗಿ ತೆರಳಿದ್ದ ಸಚಿವ ಖಾನ್, ಫ್ಲೈಓವರ್ ವಿನ್ಯಾಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಲ್ಲದೇ ಸ್ಥಳದಲ್ಲಿ ಉಪಸ್ಥಿತರಿದ್ದ ಇಂಜಿನಿಯರ್ ಅಗರ್‌ವಾಲ್‌ರ ವಿರುದ್ಧ ಅಸಭ್ಯ ಶಬ್ದಗಳಿಂದ ನಿಂದಿಸಿ ಅವರ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ.    
 
ಏತನ್ಮಧ್ಯೆ ಸಚಿವ ಖಾನ್ ವರ್ತನೆಯನ್ನು ವಿರೋಧಿಸಿದ ಇಂಜಿನಿಯರ್‌ಗಳ ಸಂಘ, ಸಚಿವರು ಕ್ಷಮೆ ಕೋರದಿದ್ದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಸರಕಾರವನ್ನು ಎಚ್ಚರಿಸಿದೆ. 
 
ಸಚಿವ ಖಾನ್ ವರ್ತನೆ ಇದು ಮೊದಲನೆಯದಲ್ಲ. ಕಳೆದ 2012 ರಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಬಹಿರಂಗವಾಗಿ ನಿಂದಿಸಿ ವಿವಾದಕ್ಕೊಳಗಾಗಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯನ್ನು ಭೇಟಿಯಾದ ವಿಶ್ವ ಬ್ಯಾಂಕ್ ಮುಖ್ಯಸ್ಥ ಜಿಮ್ ಯೊಂಗ್