Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಭೇಟಿಯಾದ ವಿಶ್ವ ಬ್ಯಾಂಕ್ ಮುಖ್ಯಸ್ಥ ಜಿಮ್ ಯೊಂಗ್

ಪ್ರಧಾನಿ ಮೋದಿಯನ್ನು ಭೇಟಿಯಾದ ವಿಶ್ವ ಬ್ಯಾಂಕ್ ಮುಖ್ಯಸ್ಥ ಜಿಮ್ ಯೊಂಗ್
ನವದೆಹಲಿ , ಗುರುವಾರ, 30 ಜೂನ್ 2016 (19:57 IST)
ಸರಕಾರದ ಪೌಷ್ಟಿಕ ಮತ್ತು ನವೀಕರಿಸಬಲ್ಲ ಶಕ್ತಿಯನ್ನು ಅನ್ವೇಷಿಸಲು ವಿಶ್ವ ಬ್ಯಾಂಕ್ ಮುಖ್ಯಸ್ಥ ಜಿಮ್ ಯೊಂಗ್ ಕಿಮ್ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪ್ರಧಾನಿ ಮೋದಿ ಕಛೇರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಜೊತೆ ವರ್ಲ್ಡ್ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್ ಅವರ ಭಾವಚಿತ್ರವನ್ನು ಟ್ವೀಟ್ ಮಾಡಿದ್ದು, ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ
 
ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಕುರಿತು ಅನ್ವೇಷಿಸಲು ಬುಧವಾರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದ ವರ್ಲ್ಡ್ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್, ಎರಡು ಮೂರು ದಿನಗಳಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ದೇಶದಲ್ಲಿರುವ ಬಡತನದ ಕುರಿತು ಹೋರಾಟ ನಡೆಸಲು ಭಾರತ ದೇಶಕ್ಕೆ ಉತ್ತಮ ಅವಕಾಶಗಳು ಒದಗಿ ಬಂದಿದ್ದು, 2030 ರ ವೇಳೆಗೆ ಭಾರತದಲ್ಲಿನ ಬಡತನ ಸಂಪೂರ್ಣವಾಗಿ ಕುಸಿಯಲಿದೆ ಎಂದು ವರ್ಲ್ಡ್ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣದ ಪ್ರಮಾಣದಲ್ಲಿ ಭಾರಿ ಇಳಿಕೆ