Webdunia - Bharat's app for daily news and videos

Install App

ಕಾನೂನು ಸಮರದಲ್ಲಿ ಮತ್ತೆ ಗೆದ್ದ ಸಲ್ಮಾನ್ ಖಾನ್

Webdunia
ಬುಧವಾರ, 18 ಜನವರಿ 2017 (11:54 IST)
ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ರಾಜಸ್ಥಾನದ ಜೋಧ್‌ಪುರ ನ್ಯಾಯಾಲಯ ಸಲ್ಮಾನ್ ಖಾನ್ ಅವರು ನಿರ್ದೋಷಿ ಎಂದು ಹೇಳಿ ಅವರನ್ನು ಖುಲಾಸೆಗೊಳಿಸಿದೆ. 
 
ಸಲ್ಮಾನ್ ಅವರಿಗೆ ಸಿಕ್ಕ ಈ ಜಯದಿಂದ ಅವರ ಮೇಲೆ ಕೋಟಿ ಕೋಟಿ ರೂಪಾಯಿ ಸುರಿದಿರುವ ಬಾಲಿವುಡ್‌ಗೆ ಕೂಡ ದೀರ್ಘ ನಿಟ್ಟುಸಿರು ಬಿಟ್ಟಿದೆ. 
 
ಸಂಶಯದ ಲಾಭ ಪಡೆದುಕೊಂಡು ಸಲ್ಮಾನ್ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ. ಸಲ್ಮಾನ್ ಗುಂಡು ಹೊಡೆದಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ನೇರವಾದ ಸಾಕ್ಷ್ಯಗಳಿರಲಿಲ್ಲ. ಸಾಂದರ್ಭಿಕ ಸಾಕ್ಷ್ಯಗಳಷ್ಟೇ ಇದ್ದವು. ಜಿಂಕೆಯ ಮೃತದೇಹ, ರಕ್ತ, ಗುಂಡುಗಳಷ್ಟೇ ಸ್ಥಳದಲ್ಲಿ ಪತ್ತೆಯಾಗಿದ್ದವು. ಅವರು ತಂಗಿದ್ದ ಹೊಟೆಲ್ ರೂಮ್‌ನಲ್ಲಷ್ಟೇ ಶಸ್ತ್ರಾಸ್ತ್ರಗಳಿದ್ದು ಇವುಗಳ ಲೈಸೆನ್ಸ್
ಕೆಲವೇ ದಿನಗಳ ಹಿಂದಷ್ಟೇ ಮುಗಿದಿತ್ತು. ಜತೆಗೆ ಅವಧಿ ಮುಂದುವರಿಕೆಗೆ ಅರ್ಜಿಯನ್ನು ಕೂಡ ಸಲ್ಲಿಸಲಾಗಿತ್ತು, ಎಂದು ನಟನ ಪರ ವಕೀಲರು ವಾದಿಸಿದ್ದರು. 
 
1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ನಡೆಯುವಾಗ ಸಲ್ಮಾನ್ ಜೋಧ್ಪುರದ ಬಳಿ ಇರುವ ರಕ್ಷಿತಾರಣ್ಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಅವರ ವಿರುದ್ಧ ಕೃಷ್ಣಮೃಗ ಬೇಟೆ, ಪರವಾನಿಗೆ ಮುಗಿದ ಬಳಿಕವೂ ಶಸ್ತ್ರಾಸ್ತ್ರ ಹೊಂದಿರುವ ಆರೋಪ ಸೇರಿದಂತೆ ಮೂರು ಪ್ರಕರಣ ದಾಖಲಾಗಿತ್ತು .
 
ಕೃಷ್ಣಮೃಗ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಈಗಾಗಲೇ ಖುಲಾಸೆಯಾಗಿದ್ದು ಪ್ರಕರಣವೀಗ ಸುಪ್ರೀಂಕೋರ್ಟ್‌ನಲ್ಲಿದೆ. ಆದರೆ ಪರವಾನಿಗೆ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷಗಳ ದೀರ್ಘಕಾಲ ವಿಚಾರಣೆ ನಡೆಸಿದ ಕೋರ್ಟ್ ಕಳೆದ 9ನೇ ತಾರೀಖಿನಿಂದ ವಿಚಾರಣೆಯನ್ನು ಮುಗಿಸಿತ್ತು. ಮತ್ತಿಂದು ಅಂತಿಮ ತೀರ್ಪನ್ನು ಪ್ರಕಟಸಿದೆ. 
 
ಮತ್ತಿಂದು ಈ ಕುರಿತು ಅಂತಿಮ ತೀರ್ಪು ಪ್ರಕಟವಾಗಲಿದ್ದು ಖುದ್ದು ಹಾಜರಾಗುವಂತೆ ಸಲ್ಮಾನ್ ಮತ್ತು ಕೃತ್ಯ ನಡೆದಾಗ ಅವರ ಜತೆಗಿದ್ದಸೈಫ್ ಅಲಿ ಖಾನ್, ನೀಲಂ, ಟಬು, ಸೋನಾಲಿ ಬೇಂದ್ರೆಗೆ ಸೂಚನೆ ನೀಡಿತ್ತು.
 
ಆರೋಪ ಸಾಬೀತಾದರೆ ಸಲ್ಮಾನ್ ಅವರಿಗೆ ಗರಿಷ್ಠ ಏಳುವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿದ್ದವು. ಹೀಗಾಗಿ ಸಲ್ಮಾನ್ ಪರ ವಕೀಲರು ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಲು ಜಾಮೀನು ಅರ್ಜಿಯನ್ನು ಸಿದ್ಧವಾಗಿಟ್ಟುಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments