Publish Date: Fri, 25 Sep 2015 (14:32 IST)
Updated Date: Fri, 25 Sep 2015 (14:33 IST)
ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾಣಿಗಳ ವಧೆ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ವಾರೆಂಟ್ ಪಡೆದಿದ್ದ ಫೈರ್‌ಬ್ರ್ಯಾಂಡ್ ಖ್ಯಾತಿಯ ನಾಯಕಿ ಸಾದ್ವಿ ಪ್ರಾಚಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
ಪ್ರಾಚಿಯವರಿಗೆ ಹಲವಾರು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಹಾಜರಾಗದಿದ್ದರಿಂದ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿ ಆದೇಶ ಹೊರಡಿಸಿತ್ತು ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರಾಚಿ ಇಂದು ತಮ್ಮ ವಕೀಲ ರಾಮ್ಪಾಲ್ ನೆಹ್ರಾ ಅವರೊಂದಿಗೆ ನ್ಯಾಯಮೂರ್ತಿಗಳ ಮುಂದೆ ಶರಣಾಗಿ, ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ.
ಕಳೆದ 2011ರ ಮೇ 12 ರಂದು ಸಾಧ್ವಿ ಪ್ರಾಚಿ ಬದೌತ್ ಪಟ್ಟಣದಲ್ಲಿರುವ ಪ್ರಾಣಿಗಳ ವಧೆಗೃಹಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದರಿಂದ ದೆಹಲಿ-ಯಮನೋತ್ರಿ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರಿಂದಾಗಿ ಸಂಚಾರಿ ಪೊಲೀಸರು ಸಾಧ್ವಿ ಪ್ರಾಚಿ ವಿರುದ್ಧ ಪ್ರಕರಣ ದಾಖಲಿಸಿದ್ದರು.