Publish Date: Sat, 17 Jul 2021 (11:52 IST)
Updated Date: Sat, 17 Jul 2021 (11:02 IST)
ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಾಲಯ ಇಂದಿನಿಂದ ಭಕ್ತಾದಿಗಳಿಗೆ ತೆರೆದುಕೊಳ್ಳಲಿದೆ.
ಇಂದಿನಿಂದ ಜುಲೈ 21 ರವರೆಗೆ ಶಬರಿಮಲೆ ದೇವಾಲಯ ತೆರೆದುಕೊಳ್ಳಲಿದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಭಕ್ತಾದಿಗಳಿಗೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
ಈ ಬಾರಿ ಯಾತ್ರೆ ಕೈಗೊಳ್ಳುವವರು ಕಡ್ಡಾಯವಾಗಿ 48 ಗಂಟೆಗಳ ಮುಂಚಿತ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಕೊಂಡೊಯ್ಯಬೇಕು. ಅಲ್ಲದೆ, ಆನ್ ಲೈನ್ ಬುಕಿಂಗ್ ಮಾಡಿದ ಕೇವಲ 5000 ಭಕ್ತಾದಿಗಳಿಗೆ ಮಾತ್ರ ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.