Select Your Language

Notifications

webdunia
webdunia
webdunia
webdunia

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ
ನವದೆಹಲಿ , ಸೋಮವಾರ, 6 ಡಿಸೆಂಬರ್ 2021 (11:01 IST)
ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪುಟಿನ್ ಅವರನ್ನು ಸ್ವಾಗತಿಸಲಿದ್ದು, ಈ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ನವೆಂಬರ್ 2019 ರಲ್ಲಿ ಬ್ರೆಸಿಲಿಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ, ಪುಟಿನ್ ಅವರನ್ನು ಭೇಟಿಯಾಗಿದ್ದರು. ನಂತರ ಇದೇ ಮೊದಲು ಮೊದಲ ಬಾರಿಗೆ ಮುಖಾಮುಖಿ ಸಭೆ ಇದಾಗಿದೆ.
ಈ ವೇಳೆ ಇವರಿಬ್ಬರು ವ್ಯಾಪಾರ, ಇಂಧನ, ಸಾಂಸ್ಕøತಿಕ, ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನದ ಮಾತುಕತೆ ನಡೆಯಲಿದೆ. ಇದರ ಜೊತೆಗೆ ಎಕೆ.200 ರೈಫಲ್ ಉತ್ಪಾದನೆ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿದೆ. 
ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ಮಟ್ಟದಲ್ಲಿ 2 + 2 ಸಂವಾದ ಕಾರ್ಯವಿಧಾನದ ಉದ್ಘಾಟನಾ ಸಭೆಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾನುವಾರ ನವದೆಹಲಿಗೆ ಆಗಮಿಸಿದರು. ಇಂದು ಅಧ್ಯಕ್ಷರು ಆಗಮಿಸುತ್ತಿದ್ದು, ಭಾರೀ ಸಿದ್ಧತೆ ನೆಡೆಯುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೂಸ್ಟರ್ ಡೋಸ್ ಬಗ್ಗೆ ಇಂದು ಮಹತ್ವದ ಸಭೆ