ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆರಂಭದಿಂದಲೂ ದೇಶಭಕ್ತಿ ಮತ್ತು ಸೇವೆಗೆ ಸಮಾನಾರ್ಥಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿಯಲ್ಲಿ ಇಂದು ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಭಜನೆಯ ನೋವಿನ ಅವಧಿಯಲ್ಲಿ ಲಕ್ಷಾಂತರ ಕುಟುಂಬಗಳು ನಿರಾಶ್ರಿತರಾದಾಗ ಸ್ವಯಂಸೇವಕರು ನಿರಾಶ್ರಿತರ ಸೇವೆಗೆ ಸೀಮಿತ ಸಂಪನ್ಮೂಲಗಳೊಂದಿಗೆ ಮುಂಚೂಣಿಯಲ್ಲಿ ನಿಂತಿದ್ದರು ಎಂದು ಅವರು ಸ್ಮರಿಸಿದರು.
ಇದು ಕೇವಲ ಪರಿಹಾರ ಕಾರ್ಯವಲ್ಲ ಎಂದು ಅವರು ಒತ್ತಿ ಹೇಳಿದರು. ಇದು ರಾಷ್ಟ್ರದ ಆತ್ಮವನ್ನು ಬಲಪಡಿಸುವ ಕಾರ್ಯವೂ ಆಗಿತ್ತು.
ಆರೆಸ್ಸೆಸ್ ತನ್ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಮಹತ್ವದ ಕೊಡುಗೆಯೆಂದರೆ ಸಮಾಜದ ವಿವಿಧ ವರ್ಗಗಳಲ್ಲಿ ಸ್ವಯಂ ಅರಿವು ಮತ್ತು ಹೆಮ್ಮೆಯನ್ನು ಜಾಗೃತಗೊಳಿಸುವುದು ಎಂದು ಒತ್ತಿ ಹೇಳಿದರು.